ಹೆಮ್ಮಾಡಿ :ಅಗಲಿದ ವಿದ್ಯಾರ್ಥಿಯ ಗೌರವಾರ್ಥ ಸಂತಾಪ ಸೂಚಕ ಸಭೆ

0
2421

Click Here

Click Here

ಕುಂದಾಪುರ ಮಿರರ್ ಸುದ್ದಿ…
ಹೆಮ್ಮಾಡಿ :ಇತ್ತೀಚಿಗೆ ನಿಧನ ಹೊಂದಿದ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ನಮೇಶನ ಸಂತಾಪ ಸಭೆಯನ್ನು ಕಾಲೇಜಿನ ವತಿಯಿಂದ ಆಯೋಜಿಸಲಾಯಿತು. ಸಭೆಯಲ್ಲಿ ಮೃತ ವಿದ್ಯಾರ್ಥಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಲಾಯಿತು.

ಮೃತ ವಿದ್ಯಾರ್ಥಿ ತಂದೆ ಲವೇಶ ಮಾತನಾಡಿ ಕಾಲೇಜಿನ ವತಿಯಿಂದ ಸಂತಾಪ ಸಭೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಲೇಜಿನ ಬಗ್ಗೆ ತಪ್ಪು ಹೇಳಿಕೆ ನೀಡಿದ್ದೇನೆ. ವಿಷಯವನ್ನು ಮನವರಿಕೆ ಮಾಡಿಕೊಂಡ ಮೇಲೆ ಕಾಲೇಜಿನಿಂದ ತಪ್ಪಿಲ್ಲದಿರುವುದು ಅರಿವಾಗಿದೆ. ನನ್ನ ದೊಡ್ಡ ಮಗ ಇದೆ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಪಡೆದಿದ್ದಾನೆ. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಉಪನ್ಯಾಸಕರಿಗೂ, ಶಿಕ್ಷಕರಿಗೂ, ಸಿಬ್ಬಂದಿವರ್ಗದವರಿಗೂ, ಊರಿನವರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.

Click Here

ಸಂತಾಪ ಸಭೆಯಲ್ಲಿ ಹೆಮ್ಮಾಡಿ ಮೀನುಗಾರರ ಸೇವಾ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಹಟ್ಟಿಯಂಗಡಿ,ಪ್ರಗತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಕುಲಾಲ್, ಉದ್ಯಮಿ ಶ್ರೀಕಾಂತ್ ಹೆಮ್ಮಾಡಿ, ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರ,ಉಪ ಪ್ರಾಂಶು ಪಾಲರಾದ ರಮೇಶ್ ಪೂಜಾರಿ, ಮುಖ್ಯ ಶಿಕ್ಷಕಿ ದೀಪಿಕಾ ಆಚಾರಿ, ಸ್ಥಳೀಯರಾದ ಹಸನ್ ಸಾಹೇಬ್, ಪ್ರವೀಣ್ ದೇವಾಡಿಗ ಜನತಾ ಪಿಯು ಹಾಗೂ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಉಪನ್ಯಾಸಕರು ಶಿಕ್ಷಕರು, ನಮೇಶ ನ ಕುಟುಂಬಸ್ಥರು ಊರಿನವರು ಉಪಸ್ಥಿತರಿದ್ದರು. ಉಪನ್ಯಾಸಕ ಉದಯ ನಾಯ್ಕ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here