ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಶವಗಾರ ಸ್ಟೋರೇಜ್ ಯೂನಿಟ್ 2 ಮಾತ್ರ ಸರಿಯಾಗಿದ್ದು ಇದರಿಂದಾಗಿ ಮೃತದೇಹವನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದು, ಕುಂದಾಪುರ ಶಾಸಕರ ಶಿಫಾರಸ್ಸಿನ ಮೇರೆಗೆ ಕರ್ಣಾಟಕ ಬ್ಯಾಂಕ್ ಸಿ.ಎಸ್.ಆರ್. ನಿಧಿಯಿಂದ ಸುಸಜ್ಜಿತವಾದ 4ಮೃತದೇಹವನ್ನು ಇರಿಸುವಂತಹ ಶವಗಾರ ಸ್ಟೋರೇಜ್ ಯೂನಿಟ್ ಕೊಡಮಾಡಿದ್ದು ಅ.೪ರಂದು ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.
ಶವಗಾರ ಸ್ಟೋರೇಜ್ ಯೂನಿಟ್ ಹಸ್ತಾಂತರದ ಪ್ರಕ್ರಿಯೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ, ಕರ್ಣಾಟಕ ಬ್ಯಾಂಕ್ ನ ಈ ಉತ್ತಮವಾದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಚಂದ್ರ ಮರಕಾಲ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ಡಿಜಿಎಂ ವಾದಿರಾಜ ಭಟ್, ಕರ್ಣಾಟಕ ಬ್ಯಾಂಕ್ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ, ಕರ್ಣಾಟಕ ಬ್ಯಾಂಕ್ ಮೆನೇಜರ್ ರಾಘವೇಂದ್ರ, ಡಿಸ್ಟ್ರಿಬ್ಯೂಟರ್ ಅಶೋಕ್, ಉಪಸ್ಥಿತರಿದ್ದರು.
ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ನಾಗೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು











