ಕುಂದಾಪುರ ಮಿರರ್ ಸುದ್ದಿ…

ಉಡುಪಿ : ಶಿಕ್ಷಣ ಅಭಿವೃದ್ಧಿಯ ಮೂಲವಾಗಿದೆ. ಶಿಕ್ಷಣದ ಗುಣಮಟ್ಟ ಕಳಪೆಯಾದಲ್ಲಿ ದೇಶದ ಗುಣಮಟ್ಟ ಕಳಪೆಯಾಗಲಿದೆ. ಈ ದೃಷ್ಟಿಯಲ್ಲಿ ಉಳಿದೆಲ್ಲ ಇಲಾಖೆಗಳಿಗಿಂತ ಶಿಕ್ಷಣ ಇಲಾಖೆ ಅತ್ಯಂತ ಕ್ರೀಯಾಶೀಲವಾಗಬೇಕು. ಮಕ್ಕಳಲ್ಲಿ ಶಿಕ್ಷಕರಾಗಬೇಕೆಂಬ ಭಾವನೆ ಕಡಿಮೆಯಾಗುತ್ತಿದೆ. ಡಾಕ್ಟರ್, ಇಂಜೀನಿಯರ್ ಆಗಬೇಕೆಂಬ ಬಯಕೆಯೇ ಅವರಲ್ಲಿ ಹೆಚ್ಚಾಗುತ್ತಿದೆ. ಶಿಕ್ಷಕ ಹುದ್ದೆ ಹಿಂದಿನ ಕಾಲದಲ್ಲಿ ಅತ್ಯಂತ ಗೌರವದ ಹುದ್ದೆಯಾಗಿತ್ತು. ಅದು ಪುನಃ ಮರುಕಳಿಸುವಂತಾಗಬೇಕು. ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಟ ಹುದ್ದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.
ಅವರು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ (ರಿ.), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಶ್ರೀ ಕೃಷ್ಣ ಮಠ ಉಡುಪಿ, ಗೀತಾ ಎಚ್.ಎಸ್.ಎನ್.ಫೌಂಡೇಶನ್ (ರಿ.) ಕೊಟೇಶ್ವರ, ಸುಗಮಕಾರರು ಮಗು ಮತ್ತು ಕಾನೂನು ಕೇಂದ್ರ, ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ರಾಜಾಂಗಣದಲ್ಲಿ ನಡೆದ 2025-26ನೇ ಸಾಲಿನ ಗುರುವಂದನಾ ಕಾರ್ಯಕ್ರಮ ಹಾಗೂ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಗೌರವಾನ್ವಿತ ಕಿರಣ್ ಎಸ್.ಗಂಗಣ್ಣನವರ್ ಮಾತನಾಡಿ ನ್ಯಾಯಾಲಯಗಳು ವ್ಯಾಜ್ಯದ ತೀರ್ಮಾನಕ್ಕೆ ಮಾತ್ರವಲ್ಲ. ಸಮಾಜಮುಖಿಯಾಗಿಯೂ ಅಳವಡಿಸಿಕೊಳ್ಳುತ್ತಿವೆ. ಕಾನೂನು ಸಲಹೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಾ ಲಭ್ಯವಿದೆ. ಎಲ್ಲಾ ಅವಶ್ಯಕ ಕಾನೂನು ಸಲಹೆಗೆ ಸದಾ ಸಹಕಾರ ನೀಡಲಿದೆ. ಎಸ್‍ಡಿಎಂಸಿ ಸಮನ್ವಯ ವೇದಿಕೆ ಸರಕಾರದ ಜವಾಬ್ದಾರಿಯನ್ನು ಗುರುತರವಾಗಿ ನಿಭಾಯಿಸುತ್ತಾ ಬಂದಿದೆ. ವಿದ್ಯಾರ್ಥಿ ಮತ್ತು ಶಿಕ್ಷಕರ ಸಮನ್ವಯತೆಯನ್ನು ಸಾಧಿಸಲು ಸಮನ್ವಯ ವೇದಿಕೆ ಪ್ರಯತ್ನಿಸಿದೆ ಎಂದು ನುಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನುಪಟೇಲ್ ಮಾತನಾಡಿ ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ ಕಾರ್ಯ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಸಮನ್ವಯ ಕೇಂದ್ರ ವೇದಿಕೆ(ರಿ.)ಯ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ವಹಿಸಿದ್ದು ಅವರು ಮಾತನಾಡಿ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ರಾಜ್ಯ ಮಟ್ಟದ ಎಲ್ಲಾ ಸರಕಾರಿ ಶಾಲೆಗಳ ಎಸ್.ಡಿ.ಎಂ.ಸಿ. ಸದಸ್ಯರಿಗೆ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿಸಿಕೊಡುವ ಕೆಲಸ ಮಾಡುತ್ತಾ ಬಂದಿದ್ದು ಮುಂದೆಯೂ ಮಾಡಲಿದೆ ಎಂದರು.
ಹೋಟೆಲ್ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಗೀತಾ ಎಚ್.ಎಸ್.ಎನ್.ಫೌಂಡೇಶನ್ ಪ್ರವರ್ತಕ ಶಂಕರ ಐತಾಳ ಅಮಾಸೆಬೈಲ್, ಮಂಗಳೂರಿನ ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿ’ಸೋಜ, ಎಸ್.ಡಿ.ಎಮ್.ಸಿ.ಸಿ.ಸಿ.ಎಫ್ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ, ಎಸ್.ಡಿ.ಎಮ್.ಸಿ.ಸಿ.ಸಿ.ಎಫ್ ಗೌರವ ಸಲಹೆಗಾರರಾದ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಕಾಪು ತಾಲೂಕು ಘಟಕ ಅಧ್ಯಕ್ಷ ರಾಜೇಶ್ ಜೆ.ಮೆಂಡನ್, ಬ್ರಹ್ಮಾವರ ತಾಲೂಕು ಘಟಕ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕುಂದಾಪುರ ಪುರಸಭಾ ಘಟಕ ಅಧ್ಯಕ್ಷ ಅಶ್ವಥ್ ಕುಮಾರ್, ಕಾರ್ಕಳ ತಾಲೂಕು ಘಟಕ ಅಧ್ಯಕ್ಷೆ ವೀಣಾ ರಾಜೇಶ್ ಭಂಡಾರಿ ಉಪಸ್ಥಿತರಿದ್ದರು.
ಉಡುಪಿ ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಡಯಟ್ ಪ್ರಾಧ್ಯಾಪಕ ಡಾ.ಕಿಶೋರ್ ಕುಮಾರ್ ಶೆಟ್ಟಿಯವರಿಗೆ ವೇದಿಕೆಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಾದ ಬಾಲಕೃಷ್ಣ ಶೆಟ್ಟಿ ಚಿತ್ತೂರು, ಮೋಹನ್ ಕಡಬ ಉಡುಪಿ, ರವಿ.ಎನ್.ಪೂಜಾರಿ ಅಲಡ್ಕ, ತಾರಾದೇವಿ ಕೋಣಿ, ವೆಂಕಟ ಕಾಳಾವರ, ರೋಶನ್ ಬೀಬಿ ಹಾಲಾಡಿ, ಜಯಶ್ರೀ ಕಾವಡಿ, ತನುಜಾಕ್ಷಿ ವಳಕಾಡು, ಆಶಾಲತಾ ಕೈಪುಂಜಾಲು, ವಸಂತಿ ದಾಸ್ ಗುಜ್ಜಾಡಿ, ಜಯ ಮೊಯಿಲಿ ಮುಡಾರು, ಕೃಷ್ಣ ನಾಯ್ಕ ಕೆರ್ವಾಶೆ ಮೈನ್, ಸುಬ್ರಹ್ಮಣ್ಯ ಉಪಾಧ್ಯ ಜಿ. ಅತ್ತೂರು ಹಾಗೂ ಬಾಲ ಕಲಾವಿದೆ ಕು. ಸಮೀಕ್ಷಾ ಸುರೇಶ್ ಹಕ್ಲಾಡಿ ಇವರನ್ನು ಸನ್ಮಾನಿಸಲಾಯಿತು.
ಹೆಸ್ಕುತ್ತೂರು ಕೃಷ್ಣ ಕೆದಿಲಾಯ ಇವರಿಗೆ ಅತ್ಯುತ್ತಮ ಎಸ್.ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ ಗೌರವದೊಂದಿಗೆ ಗೌರವಿಸಲಾಯಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಕಾಜರಗುತ್ತು, ಅಮಾಸೆಬೈಲು, ಮಣೂರು ಪಡುಕೆರೆ, ಅಚ್ಚಡ, ಮಾವಿನಕಟ್ಟೆ ಹಾಗೂ ಪೆರ್ವಾಜೆ ಸುಂದರ ಪುರಾಣಿಕ ಸಂಯುಕ್ತ ಸರಕಾರಿ ಪ್ರೌಢಶಾಲೆಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್.ಡಿ.ಎಂ.ಸಿ.ಮತ್ತು ಸರಕಾರಿ ಶಾಲೆ ಪ್ರಶಸ್ತಿ ನೀಡಲಾಯಿತು. ಕೋಟ ಪಡುಕೆರೆಯ ಗೀತಾನಂದ ಫೌಂಡೇಶನ್ (ರಿ.) ಇದರ ವತಿಯಿಂದ ವೇದಿಕೆಗೆ ಪ್ರಾಜೆಕ್ಟರ್ ಹಸ್ತಾಂತರಿಸಲಾಯಿತು.
ಎಸ್.ಡಿ.ಎಂ.ಸಿ. ಸಮನ್ವಯ ಕೇಂದ್ರ ವೇದಿಕೆ (ರಿ.) ಉಪಾಧ್ಯಕ್ಷೆ ಉಷಾ ರಮೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ತಾಲೂಕು ಘಟಕ ಅಧ್ಯಕ್ಷ ಎಸ್.ವಿ.ನಾಗರಾಜ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ್ ವಂದಿಸಿದರು. ಶೋಭಾ ಶಾಂತಾರಾಜ್ ಹಾಗೂ ಮೋಹನ್ ಸಾಲಿಕೇರಿ ನಿರೂಪಿಸಿದರು.











