ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಕೋಟ ಸಾಲಿಗ್ರಾಮ ಇವರ ಆಶ್ರಯದಲ್ಲಿ “ಮಹಿಳೆ ಸ್ಪೂರ್ತಿಯ ಚಿಲುಮೆ “ಎನ್ನುವ ವಿಷಯಾಧಾರಿತ ಕಾರ್ಯಕ್ರಮ ರೋಟರಿ ಭವನ ಸಾಸ್ತಾನದಲ್ಲಿಇತ್ತೀಚಿಗೆ ಜರುಗಿತು.
ವೈದ್ಯರಾದ ಸರಿತಾ ಉಪಾಧ್ಯ ಸಾಲಿಗ್ರಾಮ ಮಹಿಳೆ ಮತ್ತು ಕೌಟುಂಬಿಕ ಸ್ವಾಸ್ಥ್ಯ ಎಂಬ ವಿಚಾರದ ಕುರಿತು ಹಾಗೂ ಮಹಿಳೆ ಮತ್ತು ಮಕ್ಕಳಲ್ಲಿ ಕಲೆ ಎನ್ನುವ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಮತಾ ಶೆಟ್ಟಿ ಚಾಂತಾರು ಮತ್ತು ಮಹಿಳೆ ಮತ್ತು ಸಾಹಿತ್ಯಾಸಕ್ತಿಯ ಲಾಭ ವಿಷಯವಾಗಿ ಸವಿತಾ ಮಾಧವ ಶಾಸ್ತ್ರಿ ಗುಂಡ್ಮಿಇವರು ತಮ್ಮ ಚಿಂತನೆಗಳನ್ನು ಉತ್ತಮವಾಗಿ ಮಂಡಿಸಿದರು. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಕುಂದರ್ ತಮ್ಮ ಅನಿಸಿಕೆ ಪ್ರತಿಕ್ರಿಯೆ ಮೂಲಕ ವ್ಯಕ್ತಪಡಿಸಿದರು.
ಇನ್ನರ್‍ವ್ಹೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ನಮಿತಾ ಪ್ರಭು ಧನ್ಯವಾದ ನಡೆಸಿಕೊಟ್ಟರು.ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಇದರ ಅಧ್ಯಕ್ಷೆ ಯಶೋದ. ಸಿ .ಹೊಳ್ಳ ಸ್ವಾಗತಿಸಿ ಕಾರ್ಯಕ್ರಮದ ನಿರ್ವಹಣೆಗೈದರು.











