ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧಕ ಕೇಂದ್ರ ಕುತ್ಪಾಡಿ, ಉಡುಪಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಕುಂದಾಪುರ ತಾಲೂಕು, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ದತ್ತಾಶ್ರಮ ಆದಿಶಕ್ತಿ ಮಠ ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ, ಗೆಳೆಯರ ಬಳಗ ರಿ., ಆನಗಳ್ಳಿ, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರು ಸಹಯೋಗದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭೀಷೇಕದ 58ನೇ ವರ್ಧಂತಿ ಪ್ರಯುಕ್ತ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ, ಎಸ್.ಡಿ.ಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನುರಿತ ವೈದ್ಯರುಗಳಿಂದ ಅ.15 ಬುಧವಾರ, ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ ತನಕ ಆನಗಳ್ಳಿ ಗೆಳೆಯರ ಬಳಗದ ಕಲಾಮಂದಿರದಲ್ಲಿ ಆರೋಗ್ಯ ಉಚಿತ ತಪಾಸಣೆ; ಆರೋಗ್ಯ ಮಾಹಿತಿ ಶಿಬಿರ ನೆಡೆಯಲಿದೆ.
ಈ ಶಿಬಿರದಲ್ಲಿ ಪಾರ್ಶ್ವವಾಯು, ಸಂಧಿವಾತ, ಬೆನ್ನುಹುರಿ ಮತ್ತು ಕುತ್ತಿಗೆಯ ನರದ ತೊಂದರೆ, ಆಮ್ಲಪಿತ್ತ ಮತ್ತು ಕರುಳಿನ ಸಂಬಂಧಿ ಕಾಯಿಲೆ, ಚರ್ಮರೋಗ, ಸೋರಿಯಾಸಿಸ್, ಪೈಲ್ಸ್, ಪಿಸ್ತುಲಾ, ಸೈನಸ್, ಸ್ತ್ರೀ ರೋಗ, ಪ್ರಸೂತಿ ಸಂಬಂಧಿ ಕಾಯಿಲೆಗಳು, ಬಂಜೆತನ, ಗರ್ಭಸಂಸ್ಕಾರ, ಬಾಲ ರೋಗ (ಮಕ್ಕಳ ಚಿಕಿತ್ಸೆ) ಮನೋರೋಗ, ಅಸ್ತಮ ಮತ್ತು ಅಲರ್ಜಿ ಸಂಬಂಧಿ ಕಾಯಿಲೆ, ಶಿರ ಶೂಲ, ಕಣ್ಣು, ಕಣ್ಣಿನ ಪೆÇರೆಯ ತೊಂದರೆ, ಕಿವಿ, ಮೂಗು, ಗಂಟಲು ಸಮಸ್ಯೆಗಳು, ಮುಖದ ತ್ವಚೆ, ಸೌಂದರ್ಯ, ಸ್ವಾಸ್ಥ್ಯ ರಕ್ಷಣೆ ಬಗ್ಗೆ, ಬೊಜ್ಜುತನ, ಥೈರಾಯಿಡ್ ಖಾಯಿಲೆ, ಮಧುಮೇಹ ತಪಾಸಣೆ, ಉದ್ವೇಗ, ಖಿನ್ನತೆ, ನಿದ್ರಾಹೀನತೆ, ಗೀಳುರೋಗ, ಮದ್ಯ ಮತ್ತು ಮಾದಕ ವ್ಯಸನಜನ್ಯರೋಗ, ಮಾನಸಿಕ ಒತ್ತಡ, ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಮಾಹಿತಿಯೊಂದಿಗೆ ಎಲ್ಲಾ ರೋಗಗಳ ಉಚಿತ ತಪಾಸಣೆ ಮತ್ತು ಔಷಧ, ಹೃದ್ರೋಗ, ಮಾನಸಿಕ ತೊಂದರೆ ಹಾಗೂ ಮಹಿಳೆ ಮತ್ತು ಮಕ್ಕಳ ರೋಗಗಳ ಪ್ರತಿಬಂಧಕ ಉಪಾಯಗಳ ಬಗ್ಗೆ ವಿಶೇಷ ಮಾಹಿತಿ ನೀಡಲಾಗುತ್ತದೆ. ಈ ಶಿಬಿರದಲ್ಲಿ ಅಗತ್ಯವಿರುವ ಶಿಬಿರಾರ್ಥಿಗಳಿಗೆ ಇಸಿಜಿ, ಮೂಳೆ, ಖನಿಜ ಸಾಂದ್ರತೆ ಹಾಗೂ ಮಧುಮೇಹದ ರಕ್ತ ತಪಾಸಣೆಯನ್ನು ನಡೆಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.











