ಅಥ್ಲೆಟಿಕ್ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಅಪ್ರತಿಮ ಸಾಧನೆಗೈದ ಜನತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು

0
525

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ನವೆಂಬರ್ 5ರಂದು ನೇತಾಜಿ ಸುಭಾಶ್ಚಂದ್ರ ಸರ್ಕಾರಿ ಪ್ರೌಢಶಾಲೆ ಮರವಂತೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದ ವಿದ್ಯಾರ್ಥಿಗಳು ಅಪ್ರತಿಮ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕರ ವಿಭಾಗದ 100ಮೀ ಓಟದ ಸ್ಪರ್ಧೆಯಲ್ಲಿ ಹೃತಿಕ್ (1೦ನೇ ತರಗತಿ) ಚಿನ್ನದ ಪದಕ, ಹಾಗೂ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

17ರ ವಯೋಮಾನದ ಬಾಲಕಿಯರ ತ್ರಿವಿದ ಜಿಗಿತ ಸ್ಪರ್ಧೆಯಲ್ಲಿ ಶ್ರೀರಕ್ಷಾ (10ನೇ ತರಗತಿ) ಚಿನ್ನದ ಪದಕ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Click Here

17ರ ವಯಮಾನದ ಹುಡುಗಿಯರ ಚಕ್ರ ಎಸೆತ ಮತ್ತು ಗುಂಡು ಎಸೆತ ಸ್ಪರ್ಧಿಗಳಲ್ಲಿ ಶರಣ್ಯ (9ನೇ ತರಗತಿ) ಬೆಳ್ಳಿಯ ಪದಕ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ .

14ರ ವಯೋಮಾನದ ಬಾಲಕರ ವಿಭಾಗದ ರಿಲೆ ಸ್ಪರ್ಧೆ ಯಲ್ಲಿ ರಜತ್ ಎಲ್ ಪಿ, ಅಬ್ದುಲ್ ಶಯನ್ ,ಪ್ರೀತಮ್, ತನ್ವೀರ್ (8ನೇ ತರಗತಿ) ಬೆಳ್ಳಿಯ ಪದಕವನ್ನು ಗೆದ್ದಿರುತ್ತಾರೆ.

14ರ ವಯೋಮಾನದ ಬಾಲಕರ 400 ಮೀಟರ್ ಮತ್ತು 600 ಮೀಟರ್ ಓಟದ ಸ್ಪರ್ಧೆಗಳಲ್ಲಿ ಪ್ರೀತಮ್ ( 8ನೇ ತರಗತಿ)ಕಂಚಿನ ಪದಕವನ್ನು ಹಾಗೂ 14ರ ವಯೋಮಾನದ ಬಾಲಕಿಯರ ವಿಭಾಗದ ಗುಂಡು ಎಸೆತ ಸ್ಪರ್ಧೆಯಲ್ಲಿ ಅಪೇಕ್ಷ (8ನೇ ತರಗತಿ) ಕಂಚಿನ ಪದಕವನ್ನು ಪಡೆದಿರುತ್ತಾರೆ.

ಜನತಾ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಮೊಗವೀರ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ದೀಪಿಕಾ ಆಚಾರ್ಯ ಹಾಗೂ ಶಾಲೆಯ ಬೋಧಕ/ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Click Here

LEAVE A REPLY

Please enter your comment!
Please enter your name here