ಕೋಟದಲ್ಲಿ ಪಂಚವರ್ಣ ರಾಜ್ಯೋತ್ಸವ ಸದ್ಭಾವನಾ – 2025ಕಾರ್ಯಕ್ರಮ

0
204

Click Here

Click Here

ಸಮಾಜ ಘಾತುಕ ಶಕ್ತಿಗಳ ಸಂಹಾರಕ್ಕೆ ಇನ್ನಷ್ಟು ವಿಜಯಲಕ್ಷ್ಮಿಯರು ಸೃಷ್ಠಿಯಾಗಲಿದ್ದಾರೆ – ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿಕೆ

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ: ಈ ನಾಡಿನಲ್ಲಿರುವ ಸಮಾಜಗಘಾತುಕ ಶಕ್ತಿಗಳ ಸಂಹಾರಕ್ಕೆ ಇನ್ನಷ್ಟು ವಿಜಯಲಕ್ಷ್ಮಿರು ಹುಟ್ಟಿ ಬರಲಿದ್ದಾರೆ ಇದು ಎಚ್ಚರಿಕೆಯ ಕರೆಗಂಟೆ ಎಂದು ಖ್ಯಾತ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು.

ಭಾನುವಾರ ಕೋಟದ ಗಾಂಧಿಮೈದಾನದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಸದ್ಭಾವನಾ -2025 ಶೀರ್ಷಿಕೆಯಡಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ನೈತಿಕತೆ, ಸತ್ಯದ ಪರವಾಗಿ ಹೋರಾಟ ಮಾಡುವ ಪತ್ರಕರ್ತರು ಈ ನಾಡಿನಲ್ಲಿ ಕಾರ್ಯಾಚರಿಸಲು ಸಿದ್ಧರಾಗಿದ್ದಾರೆ. ಪ್ರಸ್ತುತ ಪತ್ರಕರ್ತರು ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ಆದರೆ ನೀವು ವೀಕ್ಷಕರಾಗಿ ಓದುಗರಾಗಿ ನಿಮ್ಮ ಪಾತ್ರ ಏನೆಂಬುವುದನ್ನು ಮನಗಾಣಬೇಕಿದೆ. ಅನ್ಯಾಯ ಆದಾಗ ಸೆಟೆದು ನಿಲ್ಲಬೇಕು. ಸ್ವಾರ್ಥ ಹೆಡಿತನ ಬಿಡಿ, ಭ್ರಷ್ಟರ ದುಷ್ಟರ ಆರ್ಭಟಕ್ಕೆ ಕಡಿವಾಣ ನೀವು ಸಾರ್ವಜನಿಕರು ನಿಷ್ಕಲ್ಮಶ ಹೋರಾಟ ಮಾಡಿ ಎಂದರಲ್ಲದೆ, ಮೌನ ಸಲ್ಲ ಪ್ರಶ್ನಿಸುವ ಮನಸ್ಥಿತಿ ಸೃಷ್ಠಿಸಿ. ನನ್ನ ಮೇಲೆ ನೂರಾರು ಕೇಸ್ ಗಳನ್ನು ಹಾಕಲಾಗಿದೆ. ಜೀವ ಬೆದರಿಕೆಗಳು ಇವೆ, ನನ್ನ ತಾಯಿಗೆ ನಾಲ್ಕು ಮಕ್ಕಳಲ್ಲಿ ನಾನು ಸಮಾಜಕ್ಕಾಗಿ ನೈಜ ಕಾರ್ಯ ತ್ಯಾಗಕ್ಕೆ ಸಿದ್ಧ. ಪ್ಲಾಸ್ಟಿಕ್ ಮುಕ್ತ ಸಮಾಜಕ್ಕಾಗಿ ಅದರ ಮೂಲ ಅಸ್ತಿತ್ವದ ಮೂಲಕ ಹೋರಾಟ ಮಾಡಬೇಕಿದೆ. ಈ ದಿಸೆಯಲ್ಲಿ ಪಂಚವರ್ಣ ಸಂಘಟನೆಯ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸುವುದಕ್ಕೆ ಆ ಸಂಸ್ಥೆಯ ಹಿನ್ನಲ್ಲೆಯ ಪಡೆದು ಸ್ವೀಕರಿಸಲು ಅಣಿಯಾಗಿದ್ದೇನೆ ಎಂದು ಪಂಚವರ್ಣದ ಕಾರ್ಯವೈಖರಿಯನ್ನು ಪ್ರಶಂಸಿದರು.

ಇದೇ ವೇಳೆ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಇವರಿಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಿದರು.

ಪಂಚವರ್ಣ ವಿಶೇಷ ಪುರಸ್ಕಾರವನ್ನು ವಿಶ್ವವಿಖ್ಯಾತ ರಥಶಿಲ್ಪಿ ಕೋಟೇಶ್ವರ ರಾಜಗೋಪಾಲ ಆಚಾರ್ಯ ಇವರಿಗೆ ಉದ್ಯಮಿ ಮೊಳಹಳ್ಳಿ ದಿನೇಶ್ ಹೆಗ್ಡೆ ಪ್ರದಾನಿಸಿದರು.

ಇದೇ ವೇಳೆ ಮಾಸ್ಟರ್ ಅಥ್ಲೆಟಿಕ್ ಪಟು ಅಶ್ವಿನಿ ಅರಳಿ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ, ಖ್ಯಾತ ನಿರೂಪಕಿ ಕೋಟ ರೇವತಿ ಶೆಟ್ಟಿ ಬೆಂಗಳೂರು ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಬನ್ನಾಡಿ ಪದ್ದು ಆಚಾರ್ ಸ್ಮರಣಾರ್ಥ ಅಶಕ್ತ, ಆರೋಗ್ಯ ನಿಧಿ ವಿತರಣೆ, ಸಂತೋಷ್ ಕುಮಾರ್ ಕೋಟ ಇವರ ನೆನಪಿನಲ್ಲಿ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಿಗೆ ಶೈಕ್ಷಣಿದತ್ತಿನಿಧಿ, ವಿದ್ಯಾರ್ಥಿಗಳಿಗೆ ಪುನಿತ್ ರಾಜ್ ಕುಮಾರ್ ವಿದ್ಯಾನಿಧಿಯನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.

Click Here

ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಆರೋಗ್ಯ ಪರಿಕರ, ಕೋಟದ ಸೇವಾಸಂಗಮ ಶಿಶುಮಂದಿರಕ್ಕೆ ಸಮವಸ್ತ್ರ ವಿತರಣೆ ಜರಗಿತು.

ಬೆಂಗಳೂರು ಕ್ಯಾಪ್ಸ್ ಫೌಂಡೇಶನ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ಸಮಾಜ ಶೀರ್ಷಿಕೆಯಡಿ ಒಂದು ಸಾವಿರ ಬಟ್ಟೆ ಕೈಚೀಲಗಳನ್ನು ಕ್ಯಾಪ್ಸ್ ಫೌಂಡೇಶನ್ ಮುಖ್ಯಸ್ಥ ಸಿ.ಎ ಚಂದ್ರಶೇಖರ ಶೆಟ್ಟಿ ಕೋಟ ಸಿ ಎ ಬ್ಯಾಂಕ್ ಸಿಇಓ ಶರತ್ ಕುಮಾರ್ ಶೆಟ್ಟಿಯವರಿಗೆ ಸಾಂಕೇತಿಕವಾಗಿ ವಿತರಿಸಿದರು.

ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು.

ಕೋಟ ಸಹಕಾರಿ ವ್ಯಸಾಯಕ ಸಂಘದ ಅಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣ ಕಾಂಚನ್ ಅಭಿನಂದನಾ ನುಡಿಗಳನ್ನಾಡಿದರು.

ಮುಂಬೈ ಓಎನ್‍ಜಿಸಿ ನಿವೃತ್ತ ಪ್ರಭಂದಕ ಬನ್ನಾಡಿ ನಾರಾಯಣ ಆಚಾರ್ ಶುಭಶಂಸನೆಗೈದರು.

ಮುಖ್ಯ ಅಭ್ಯಾಗತರಾಗಿ ಮುಂಬೈನ ಸಮಾಜಸೇವಕ ಬಡಾಮನೆ ರತ್ನಾಕರ ಶೆಟ್ಟಿ, ಫೇವೆರೆಟ್ ಕ್ಯಾಶು ಇಂಡಸ್ಟ್ರೀಸ್ ಜನ್ನಾಡಿ ಮಾಲಿಕ ಶಂಕರ್ ಹೆಗ್ಡೆ, ಕುಂದಾಪುರ ಮಾತಾ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಕಾಶ್ ಸಿ ತೋಳಾರ್, ಯಡಾಡಿ ಮತ್ಯಾಡಿ ಸುಜ್ಞಾನ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ರಮೇಶ್ ಶೆಟ್ಟಿ, ಗುತ್ತಿಗೆದಾರ ಗುಂಡ್ಮಿ ಅವಿನಾಶ್ ಶೆಟ್ಟಿ ಬೆಂಗಳೂರು, ಸೃಷ್ಠಿ ಇಂಜಿನಿಯರ್ ಮಣಿಪಾಲ ಇದರ ಮುಖ್ಯಸ್ಥ ಜಯರಾಜ್ ವಿ ಶೆಟ್ಟಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ್ ಹೊಳ್ಳ, ಸಾಂಸ್ಕೃತಿಕ ಚಿಂತಕ ರಶಿರಾಜ್ ಸಾಸ್ತಾನ, ಸಾಮಾಜಿಕ ಕಾರ್ಯಕರ್ತ ಕೆ. ದಿನೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಎಚ್ ಕುಂದರ್, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಬೆಂಗಳೂರಿನ ಟಿ.ವಿ ನಿರೂಪಕಿ ಕೋಟ ರೇವತಿ ಶೆಟ್ಟಿ ನಿರೂಪಿಸಿದರೆ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ವಂದಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ಕಾರ್ಯಕ್ರಮ ಸಂಯೋಜಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here