ಕುಂದಾಪುರ ಮಿರರ್ ಸುದ್ದಿ…
ಕಿರಿಮಂಜೇಶ್ವರ: ನವೆಂಬರ್17ರಂದು ಕೊಲ್ಲೂರಿನಲ್ಲಿ ನಡೆದ ಜಿಲ್ಲಾಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ 7 ವಿದ್ಯಾರ್ಥಿಗಳು ಜಿಲ್ಲಾಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರಜ್ಞಾ (8ನೇ ತರಗತಿ), ಅಪೇಕ್ಷಾ(8ನೇ ತರಗತಿ),ವೈಭವಿ (7ನೇ ತರಗತಿ) ಚಾರ್ವಿ (7ನೇ ತರಗತಿ) ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
14ರ ವಯೋಮಾನದ ಹುಡುಗರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಇಬ್ಬರು ವಿದ್ಯಾರ್ಥಿಗಳಾದ ಅಭಿಲಾಶ್ (8ನೇ ತರಗತಿ), ಮತ್ತು ಶ್ರೇಯಸ್ (8ನೇ ತರಗತಿ) ರಾಜ್ಯಮಟ್ಟದಲ್ಲಿ ಆಡುವ ಅರ್ಹತೆಯನ್ನು ಗಳಿಸಿರುತ್ತಾರೆ.
17ರ ವಯೋಮಾನದ ಹುಡುಗಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಸಾನ್ವಿ (9ನೇ ತರಗತಿ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಜನತಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಗಣೇಶ ಮೊಗವೀರ ಮತ್ತು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕಿಯಾದ ದೀಪಿಕಾ ಆಚಾರ್ಯ ಅಭಿನಂದನೆಗಳನ್ನು ಸಲ್ಲಿಸಿದರು.
ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಮತ್ತು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರದ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.











