ಕೋಟ ಸಹಕಾರಿ ಸಂಘದ ಪಡುಕರೆ ಶಾಖೆ ನೂತನ ಶಾಖಾ ಕಟ್ಟಡಕ್ಕೆ ಶಿಲಾನ್ಯಾಸ

0
299

Click Here

Click Here

ಕೃಷಿ ಸಾಲ ನಿರ್ವಹಣೆಯಲ್ಲಿ ಸಹಕಾರ ಸಂಘದ ಕೊಡುಗೆ ಮಹತ್ವದ್ದು – ಡಾ.ರಾಜೇಂದ್ರ ಕುಮಾರ್

ಕುಂದಾಪುರ: ಸಹಕಾರಿ ಸಂಘದ ಮೂಲಕ ರೈತರಿಗೆ ನಾವು ಪ್ರತಿ ವರ್ಷ ಕೃಷಿ ಸಾಲ ನೀಡುತ್ತೇವೆ. ಆದರೆ ಸರಕಾರದಿಂದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗೆ ಆ ಹಣ ಪಾವತಿಯಾಗುವುದು ಎರಡು – ಮೂರು ವರ್ಷ ತಡವಾಗುತ್ತಿದೆ. ಆದರೂ ಒಂದೇ ಒಂದು ಗ್ರಾಹಕರಿಗೆ ಸಮಸ್ಯೆಯಾಗದ ರೀತಿಯಲ್ಲಿ ಕೃಷಿ ಸಾಲದ ನಿರ್ವಹಣೆನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಸ್ಥಳೀಯ ಸಹಕಾರಿ ಸಂಘಗಳು ಮಾಡುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು ಹಾಗೂ ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ತಿಳಿಸಿದರು.

Click Here

ಅವರು ಡಿ.8ರಂದು ಕೋಟ ಸಹಕಾರಿ ಸಂಘದ ಪಡುಕರೆ ಶಾಖೆ ನೂತನ ಶಾಖಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಕೋಟ ಸಹಕಾರಿ ಸಂಘ ಜಿಲ್ಲೆಗೆ ಮಾದರಿಯಾಗಿದೆ ಮುಂದೆ ರಾಜ್ಯಕ್ಕೆ ಮಾದರಿಯಾಗುವ ಎಲ್ಲ ಅರ್ಹತೆಗಳು ಈ ಸಂಘಕ್ಕಿದೆ ಎಂದರು.

ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಶಾಖೆಗಳಲ್ಲೂ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎನ್ನುವುದು ನಮ್ಮ ಧ್ಯೇಯವಾಗಿದೆ. ಹೀಗಾಗಿ ಎಲ್ಲ ಶಾಖೆಗಳಿಗೂ ಸ್ವಂತ ಕಟ್ಟಡ, ಹಿಂದೆ ಇರುವ ಕಟ್ಟಡಗಳ ನವೀಕರಣ ಹಾಗೂ ಹೊಸ-ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ. ಆರ್., ಕುಂದಾಪುರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ಸುಧೀರ್ ಕುಮಾರ್, ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಸತೀಶ ಕುಂದರ್, ಸದ್ಯೋಜಾತ ದೇವಸ್ಥಾನ ಮೊಕ್ತೇಸರ ಶಿವಾನಂದ ಐತಾಳ, ಸಂಘದ ನಿರ್ದೇಶಕರಾದ ಟಿ. ಮಂಜುನಾಥ, ಕೆ. ಉದಯ ಕುಮಾರ್ ಶೆಟ್ಟಿ, ರವೀಂದ್ರ ಕಾಮತ್, ಮಹೇಶ್ ಶೆಟ್ಟಿ ಎಂ., ರಶ್ಮಿತಾ, ರಂಜಿತ್ ಕುಮಾರ್, ಚಂದ್ರ ಪೂಜಾರಿ ಪಿ., ವಸಂತಿ ಪೂಜಾರ್ತಿ, ಜಿ. ಅಜಿತ್ ದೇವಾಡಿಗ, ಪ್ರೇಮಾ, ದಿನಕರ ಶೆಟ್ಟಿ, ಪಿ. ಶೇಖರ ಮರಕಾಲ, ರಾಜಾರಾಮ ಶೆಟ್ಟಿ, ಉಪಾಧ್ಯಕ್ಷ ಎಚ್. ನಾಗರಾಜ ಹಂದೆ, ಶಾಖಾ ವ್ಯವಸ್ಥಾಪಕಿ ಸಂಧ್ಯಾ ಇದ್ದರು.

ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ತಿಮ್ಮ ಪೂಜಾರಿ ಸ್ವಾಗತಿಸಿ, ಶಿಕ್ಷಕ ಸತೀಶಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.

Click Here

LEAVE A REPLY

Please enter your comment!
Please enter your name here