ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಭಾರತೀಯ ಆಟೋರಿಕ್ಷ ಮಜ್ದೂರ್ ಸಂಘ ಕುಂದಾಪುರ ತಾಲೂಕು ಇದರ 19 ನೇ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಗಾರ ಕುಂದಾಪುರ ಲಕ್ಷ್ಮೀನರಸಿಂಹ ಕಲಾಮಂದಿರ ಜೂನಿಯರ್ ಕಾಲೇಜು ಇಲ್ಲಿ ನಡೆಯಿತು.
ಕುಂದಾಪುರ ಸಂಚಾರಿ ಪೊಲೀಸ್ ಠಾಣಾಧಿಕಾರಿ ನೂತನ್ ಡಿ ಇ ಮಾಹಿತಿ ಕಾರ್ಯಗಾರವನ್ನು ನಡೆಸಿ ಕೊಡುದರ ಮೂಲಕ ಅತ್ಯುತ್ತಮವಾದ ಮಾಹಿತಿಗಳನ್ನು ನೀಡಿದರು.
ಅನಾರೋಗ್ಯದ ಸಮಸ್ಯೆಯಲ್ಲಿರುವ ಸಂಘದ ಸದಸ್ಯರಿಗೆ ಆರ್ಥಿಕ ಸಹಕಾರ ನೀಡಲಾಯಿತು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎ ಮೊಗವೀರ ಇವರು ವರದಿ ಮಂಡನೆ ಮಾಡಿದರು. ಸಂಘಟನೆಯ ಅಧ್ಯಕ್ಷ ಅಶೋಕ್ ಕೆರೆಕಟ್ಟೆ ಅಧ್ಯಕ್ಷೀಯ ಭಾಷಣವನ್ನು ಮಾಡಿ ಸಂಘಟನೆಯನ್ನು ಬೆಳೆಸಲು ತಮ್ಮೆಲ್ಲರ ಉತ್ತಮ ರೀತಿಯ ಸಹಕಾರವನ್ನು ನೀಡಬೇಕು. ಸದಸ್ಯರು ಪ್ರತಿ ಸಭೆಯಲ್ಲಿ ಭಾಗವಹಿಸಬೇಕು ಹಾಗೂ ಇನ್ನಿತರ ವಿಷಯಗಳನ್ನು ತಿಳಿಸಿದರು.
2026- 27ರ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಪುತ್ರನ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ರವಿ ಪುತ್ರನ್ ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಬಿಎಂಎಸ್ ಸದಸ್ಯ ಸುರೇಂದ್ರ ಕಾಂಚನ್ ಇವರು ವಂದನಾರ್ಪಣೆ ಮಾಡಿದರು.











