ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕರ್ನಾಟಕ ಸರ್ಕಾರ ಬಾಲ ವಿಕಾಸ ಅಕಾಡೆಮಿ ಕೊಡ ಮಾಡುವ ರಾಜ್ಯಮಟ್ಟದ ಬಾಲ ಗೌರವ ಪ್ರಶಸ್ತಿಗೆ ಉದ್ಭವಿ ಯು.ಶೆಟ್ಟಿ ಆಯ್ಕೆಯಾಗಿದ್ದಾರೆ. ಅಕಾಡೆಮಿ ನೀಡಿರುವ ಆಯ್ಕೆ ಪಟ್ಟಿಯಲ್ಲಿ 2023 -24ನೇ ಸಾಲಿನ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆ, ವಿಜ್ಞಾನ ಮಾದರಿ ತಯಾರಿಕಾ ಸ್ಪರ್ಧೆಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆಯನ್ನು ಪರಿಗಣಿಸಿ ವಿಜ್ಞಾನ ಕ್ಷೇತ್ರ ವಿಭಾಗದಲ್ಲಿ ಇವರಿಗೆ ಬಾಲ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯನ್ನು ಡಿಸೆಂಬರ್ 16ರಂದು ಬೆಳಗಾವಿಯ ಸುವರ್ಣ ಸೌದದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಾಡಲಾಗುತ್ತಿದೆ. ಇವರು ಹೇರಾಡಿ ಶಿಕ್ಷಕ ದಂಪತಿಗಳಾದ ಉದಯ್ ಶೆಟ್ಟಿ ಹಾಗೂ ವೀಣಾ ಇವರ ಪುತ್ರಿಯಾಗಿದ್ದಾರೆ.











