ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ವತಿಯಿಂದ ನೀಡುವ ‘ಬಾಲಗೌರವ ಪ್ರಶಸ್ತಿ’ಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರ ತ್ರಾಸಿ ಗ್ರಾಮದ ಅನುರಾಗ ನಾಯಕ್ ಆಯ್ಕೆಯಾಗಿದ್ದಾರೆ.
ಡಿ.16ರಂದು ಬೆಳಗಾವಿಯ ಸುವರ್ಣ ಸೌಧದ (ಗಾಂಧಿ ಪ್ರತಿಮೆ ಹತ್ತಿರ) ಮುಖ್ಯ ದ್ವಾರದ ಬಳಿ ಇರುವ ಸಭಾಭವನದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ವಿಕಲಚೇತನ ಪ್ರತಿಭೆಯಾಗಿರುವ ಅನುರಾಗ್ ನಾಯಕ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕೋಟ ಶಿವರಾಮ ಕಾರಂತ ಬಾಲಪ್ರತಿಭೆ ಪುರಸ್ಕಾರ ಸಹಿತ ಅನೇಕ ಪ್ರಶಸ್ತಿಯನ್ನು ಹಾಗೂ ಸಮ್ಮಾನಗಳನ್ನು ಪಡೆದುಕೊಂಡಿದ್ದಾರೆ.











