ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು, ಮಣೂರು ಫ್ರೆಂಡ್ಸ್ ,ಸಮುದ್ಯತಾ ಗ್ರೂಪ್ಸ್ ಕೋಟ ಇವರ ಸಹಯೋಗದೊಂದಿಗೆ ಕೋಟತಟ್ಟು ಗ್ರಾಮಪಂಚಾಯತ್ ಸಂಯೋಜನೆಯೊಂದಿಗೆ 285 ನೇ ಭಾನುವಾರದ ಪರಿಸರಸ್ನೇಹಿ ಬೀಚ್ ಕ್ಲಿನಿಂಗ್ ಕಾರ್ಯಕ್ರಮ ಕೋಟತಟ್ಟು ಪಡುಕರೆ ಶಿರಸಿಮಾರಿಯಮ್ಮ ಕಡುವಿನ ಬಾಗಿಲು ಇಲ್ಲಿ ಜರಗಿತು.
ಕಾರ್ಯಕ್ರಮವನ್ನು ಕೋಟತಟ್ಟು ಗ್ರಾಮಪಂಚಾಯತ್ ಮಾಜಿ ಸದಸ್ಯೆ ಸುಜಾತ ಉದಯ್ ತಿಂಗಳಾಯ ಚಾಲನೆ ನೀಡಿದರು.
ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ಶ್ಯಾಮಲ ಸಿ ಪುತ್ರನ್ ಮತ್ತಿತರರು ಇದ್ದರು.
ಕಾರ್ಯಕ್ರಮವನ್ನು ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.











