ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದಿಂದ ನಮ್ಮ ಕರಾವಳಿ ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ ಬೀಚ್ ಕ್ಲಿನಿಂಗ್ ಅಭಿಯಾನ

0
331

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸ್ವಚ್ಛ ಕಡಲತೀರ ನಮ್ಮ ಹೊಣೆ ಎನ್ನುವ ದ್ಯೇಯೋದ್ದೇಶದೊಂದಿಗೆ ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕೊಟೇಶ್ವರ ಘಟಕ ಹಾಗೂ ಮಹಿಳಾ ಸಂಘಟನೆ ನೇತೃತ್ವದಲ್ಲಿ ಭಾನುವಾರ ಬೀಜಾಡಿ ಸಮುದ್ರ ತೀರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತು.

ಸ್ವಚ್ಛತಾ ಕಾರ್ಯಕ್ಕೆ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ ಚಾಲನೆ ನೀಡಿದರು.

Click Here

ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಬೀಜಾಡಿ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಭಾಗವಹಿಸಿ ಮಾನವನ ಅನಾಗರಿಕತೆಯಿಂದ ಜಲಚರ ಜೀವಿಗಳಿಗೆ ಉಂಟಾಗುವ ಹಾನಿಯ ಕುರಿತು ಸಾಕಷ್ಟು ಮಾಹಿತಿಗಳನ್ನು ನೀಡಿ, ಪ್ರತಿ ತಿಂಗಳಿಗೊಮ್ಮೆ ಇಂತಹ ಉತ್ತಮ ಕಾರ್ಯಕ್ರಮವನ್ನು ನಡೆಸುವಲ್ಲಿ, ನನ್ನ ಸಂಪೂರ್ಣ ಸಹಕಾರ ಇದೆ ಅನ್ನೋವ ಭರವಸೆಯನ್ನು ನೀಡಿದರು.

ಘಟಕದ ಗೌರವಾಧ್ಯಕ್ಷ ಆನಂದ್ ಕುಂದರ್ ಅಜ್ಜರಬೆಟ್ಟು, ಸ್ಥಾಪಕಾಧ್ಯಕ್ಷ ಸತೀಶ್ ನಾಯ್ಕ್, ನಿಕಟಪೂರ್ವ ಅಧ್ಯಕ್ಷ ನಾಗರಾಜ್ ಬೀಜಾಡಿ, ಜಿಲ್ಲಾ ಉಪಾಧ್ಯಕ್ಷ ರವೀಶ್ ಎಸ್ ಕೊರವಾಡಿ, ಬೀಜಾಡಿ ಪಂಚಾಯತ್ ಸದಸ್ಯ ಅನಿಲ್ ಚಾತ್ರಬೆಟ್ಟು , ಘಟಕದ ಮಾಜಿ ಗೌರವಾಧ್ಯಕ್ಷ ಸುರೇಶ ಶಾನಾಡಿ, ಮಹಿಳಾ ಅಧ್ಯಕ್ಷೆ ಗಾಯತ್ರಿ ತೆಕ್ಕಟ್ಟೆ, ಜೊತೆ ಕಾರ್ಯದರ್ಶಿ ರಂಜಿತ್ ಚಾತ್ರಬೆಟ್ಟು, ಮಾಜಿ ಅಧ್ಯಕ್ಷರು, ಮಾಜಿ ಮಹಿಳಾ ಅಧ್ಯಕ್ಷರು, ಗುರಿಕಾರರು, ಉಪಾಧ್ಯಕ್ಷರು, ಕೋಶಾಧಿಕಾರಿ, ಕ್ರೀಡಾ ಕಾರ್ಯದರ್ಶಿ, ಸಂಘಟನೆಯ ಪದಾಧಿಕಾರಿಗಳು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here