ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೋಟದ ಪಂಚವರ್ಣ ಮಹಿಳಾ ಮಂಡಲ ಇದರ ವತಿಯಿಂದ ಯಕ್ಷಗುರು ಗುರುವಂದನಾ ಕಾರ್ಯಕ್ರಮ ಶನಿವಾರ ಸಂಘದ ಕಛೇರಿಯಲ್ಲಿ ಜರಗಿತು.
ಪಂಚವರ್ಣ ರಾಜ್ಯೋತ್ಸವ ಅಂಗವಾಗಿ ಯಕ್ಷಗುರು ಕೊಯ್ಕೂರು ಸೀತಾರಾಮ ಶೆಟ್ಟಿ ಯಕ್ಷ ಹೆಜ್ಜೆಯ ಮೂಲಕ ಯಕ್ಷಗಾನ ನೃತ್ಯಕ್ಕೆ ಕಾಲಿರಿಸಿದ ಪಂಚವರ್ಣ ಮಹಿಳಾ ಮಂಡಲ ಈ ನಿಮಿತ್ತ ಗುರುವಂದನೆ ಸಲ್ಲಿಸಿಕೊಂಡಿತು.
ಈ ಸಂದರ್ಭದಲ್ಲಿ ಯಕ್ಷಗುರು ಕೊಯ್ಕೂರು ಸೀತಾರಾಮ ಶೆಟ್ಟಿ ಗುರುವಂದನೆ ಸ್ವೀಕರಿಸಿ ಶಿಷ್ಯೆ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಮಾತೃಸಂಸ್ಥೆ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಭಜನಾ ಮಂಡಳಿಯ ಸಂಚಾಲಕಿ ಗೀತಾ ಶಿವರಾಂ, ಸಾಂಸ್ಕೃತಿಕ ಕಾರ್ಯದರ್ಶಿ ಶ್ಯಾಮಲ ಸಿ ಪುತ್ರನ್ ಇತರರು ಇದ್ದರು.
ಕಾರ್ಯಕ್ರಮವನ್ನು ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.











