ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಗಂಗೊಳ್ಳಿಯ ಇತಿಹಾಸ ಪ್ರಸಿದ್ಧ ಕೊಸೆಸಾಂವ್ ಮಾತೆಯ ಚರ್ಚಿನಲ್ಲಿ ಕಥೊಲಿಕಾ ವಲಸೆ ಕಾರ್ಮಿಕರ ಸಹಮಿಲನ ಹಾಗೂ ಹೊಸ ವರ್ಷಾಚರಣೆಯ ಸಂಭ್ರಮವನ್ನು ಜನವರಿ 1,2026 ರಂದು ಗಂಗೊಳ್ಳಿಯ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಆಚರಿಸಲಾಯಿತು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮಗುರುಗಳಾದ ವಂದನೀಯ ಥೋಮಸ್ ರೋಶನ್ ಡಿಸೋಜ ರವರು ಬೆಳಿಗ್ಗೆ 8.00 ಗಂಟೆಗೆ ಪೂಜೆಯ ಪವಿತ್ರ ಬಲಿದಾನವನ್ನು ನೇರವೇರಿಸಿದರು.
ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಂದನೀಯ ತೋಮಸ್ ರೋಶನ್ ಡಿಸೋಜರವರು ಒರಿಸ್ಸಾ, ಜಾರ್ಖಂಡ್, ಛತ್ತಿಸಗಡ ಹಾಗೂ ಮಧ್ಯ ಪ್ರದೇಶದ ಕಥೊಲಿಕ ವಲಸೆ ಕಾರ್ಮಿಕರನ್ನು ಉದ್ದೇಶಿಸಿ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತಾ ಎಲ್ಲರಿಗೂ ಶುಭವನ್ನು ಹಾರೈಸಿದರು.
ಸಂಪನ್ಮೂಳ ವ್ಯಕ್ತಿಗಳಾಗಿ ಆಗಮಿಸಿದ್ದ ಉಡುಪಿ ಧರ್ಮಪ್ರಾಂತ್ಯದ ವಲಸೆ ಕಾರ್ಮಿಕರ ಆಯೋಗದ ನಿರ್ದೇಶಕರಾದ ಎಲ್ರೋಯ್ ಕಿರನ್ ಕ್ರಾಸ್ಟೊರವರು ಮಾತನಾಡಿ ” ನಿನ್ನಂತೆ ನಿನ್ನ ಪರರನ್ನು ಪ್ರೀತಿಸು ಎನ್ನುವ ಪ್ರಭು ಯೇಸು ಕ್ರಿಸ್ತರ ನುಡಿಯಂತೆ ನಾವೆಲ್ಲರು ಹೊಸ ವರ್ಷಾಚರಣೆಯನ್ನು ಆಚರಿಸಲು ಪ್ರೀತಿಯಿಂದ ಸೇರಿದ್ದೇವೆ. ಈ ನಮ್ಮ ಸಂಭ್ರಮದಿಂದ ನಮ್ಮಲ್ಲಿ ಅನ್ಯೋನ್ಯತೆ ವೃದ್ಧಿಸುವುದು. ಇಂತಹ ಕಾರ್ಯಕ್ರಮಗಳು ಮುಂದೆಯು ನಡೆಯಲಿ ಹಾಗೂ ನಮ್ಮ ಭಾಂದ್ಯವ್ಯ ಇನ್ನಷ್ಟು ವೃದ್ಧಿಸಲಿ, ತಮ್ಮ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ತಾವು ದುಡಿದದನ್ನು ದುಂದುವೆಚ್ಚಗಳಿಗೆ ವ್ಯಯಿಸದೆ ಉಳಿತಾಯ ಮಾಡಿದಾಗ ನಿಮ್ಮ ಶ್ರಮ ವ್ಯರ್ಥವಾಗದೇ , ನಿಮ್ಮ ಕನಸುಗಳು ನನಸಾಗಲಿರುವವು” ಎಂದು ಎಲ್ಲರಿಗೂ ಶುಭವನ್ನು ಹಾರೈಸಿದರು.
ಸಭೆಯಲ್ಲಿ ಸೇರಿದ ಎಲ್ಲಾ ವಲಸೆ ಕಾರ್ಮಿಕರು ತಮ್ಮ ಪರಿಚಯವನ್ನು ಸಭೆಗೆ ನೀಡಿ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಹಂಚಿಕೊಂಡರು.
ವೇದಿಕೆಯಲ್ಲಿ ಗಂಗೊಳ್ಳಿ ಕಾರ್ಮೆಲ್ ಕಾನ್ವೆಂಟ್ ನ ಮುಖ್ಯಸ್ಥರಾದ ಭಗಿಸಿ ಗ್ರೇಸಿ ಎ.ಸಿ.,2023-2025 ರ ಸಾಲಿನ ಆಯೋಗಗಳ ಸಂಯೋಜಕರಾದ ರೆನಿಟಾ ಬಾರ್ನೆಸ್, 2026-28 ನೇ ಸಾಲಿನ ಆಯೋಗಗಳ ಸಂಯೋಜಕರಾದ ಜೆಸಿಂತಾ ಡಿಸೋಜ, ಗಂಗೊಳ್ಳಿ ಕಥೊಲಿಕ್ ಸಭಾ ಘಟಕದ ಅಧ್ಯಕರಾದ ಎಡ್ವರ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಿರಣ್ ಪಿಂಟೊ ಸ್ವಾಗತಿಸಿ, ಪ್ರೀತಿ ಫೆರ್ನಾಂಡಿಸ್ ವಂದಿಸಿದರು. ಗಂಗೊಳ್ಳಿ ಚರ್ಚಿನ ವಲಸೆ ಕಾರ್ಮಿಕರ ಆಯೋಗದ ಸಂಚಾಲಕರಾದ ಸೆಲಿನ್ ಲೋಬೊ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ನಂತರ ವಂದನೀಯ ತೋಮಸ್ ರೋಶನ್ ಡಿಸೋಜರವರ ನೇತೃತ್ವದಲ್ಲಿ ಮನೋರಂಜನಾ ಆಟಗಳನ್ನು ಆಡಿಸಿ, ಬಹುಮಾನಗಳನ್ನು ವಿತರಿಸಲಾಯಿತು.











