ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ – ನೇರಳಕಟ್ಟೆ ಮಾರ್ಗದ ಶೆಟ್ರ ಕಟ್ಟೆ ಎಂಬ ತಿರುವಿನಲ್ಲಿ ಸರಕಾರಿ ಬಸ್ಸಿಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸಿನಲ್ಲಿದ್ದ ಹಲವು ವಿದ್ಯಾರ್ಥಿಗಳು ಸೇರಿದಂತೆ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.
ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಟಿಪ್ಪರ್ ಅತಿ ವೇಗವಾಗಿ ಚಲಿಸುತ್ತಿರುವ ಪರಿಣಾಮವಾಗಿ ಹಲವು ಅಮೂಲ್ಯ ಜೀವಗಳು ಬಲಿಯಾಗುವ ಸುದ್ದಿಗಳು ಸರ್ವೆ ಸಾಮಾನ್ಯವಾಗುತ್ತಿರುವುದು ಖೇದಕರವಾಗಿದೆ.
ಬಹುತೇಕ ಟಿಪ್ಪರ್ ಚಾಲಕರು ನಿಯಮ ಮೀರಿ ಅತೀ ವೇಗದಿಂದ ಟಿಪ್ಪರ್ ಓಡಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮೌನವಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಇಂತಹ ಸಾವು -ನೋವು ತಪ್ಪಿಸಲು ಕೂಡಲೇ ಕಾರ್ಯಪ್ರವ್ರತ್ತರಾಗಬೇಕೆಂದು ಸಿಪಿಎಂ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಗಂಭೀರ ಗಾಯಕ್ಕೊಳಗಾದವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದ್ದಾರೆ.











