ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಚಳಿಗಾಲದ ಕೊನೆಯ ವಾರದ ಪ್ರಯಾಣಿಕರ ಒತ್ತಡ ನಿವಾರಿಸುವ ಸಲುವಾಗಿ ಓಡಿಸಿದ ಯಶವಂತಪುರ ಕಾರವಾರ ರೈಲುಗಳ ಬಹುತೇಕ ಟಿಕೇಟುಗಳು ಸುರತ್ಕಲ್ ಮತ್ತು ಕಾರವಾರದ ನಡುವೆ ಬುಕ್ ಆಗುವ ಮೂಲಕ ಎರಡೂ ರೈಲುಗಳು ತುಂಬಿ ತುಳುಕಿದ್ದು ಒತ್ತಡ ನಿವಾರಣೆಗೆ ನೈರುತ್ಯ ರೈಲ್ವೇ ಎರಡು ವಿಶೇಷ ಕೋಚ್ ಅಳವಡಿಸ ಬೇಕಾದ ಪರಿಸ್ಥಿತಿ ಉಂಟಾಯಿತು.
ಬೆಂಗಳೂರಿನಿಂದ ಹೊರಟ ರೈಲು ಎಲ್ಲೂ ಇಂಜಿನ್ ರಿವರ್ಸ್ ಇಲ್ಲದೇ ಪಡೀಲ್ ಬೈಪಾಸ್ ನೇರ ಮಾರ್ಗದ ಮೂಲಕ ಮಂಗಳೂರಿನ ಸುರತ್ಕಲ್ ಉಡುಪಿ ಮಾರ್ಗದಲ್ಲಿ ಕಾರವಾರ ಕಡೆ ಪ್ರಯಾಣಿಸಿದ ಕಾರಣ ಪ್ರಯಾಣಿಕರು ಕರಾವಳಿಯ ಪ್ರವಾಸೀ ಕೇಂದ್ರಗಳಿಗೆ ತಲುಪಲು ವಿಶೇಷ ರೈಲುಗಳನ್ವೇ ಬಳಸಿದರು.
ಇರುವ 750 ಸ್ಲೀಪರ್ ಟಿಕೇಟುಗಳಲ್ಲಿ ಸುಮಾರು 550 ಟಿಕೇಟುಗಳು ಕೊಂಕಣ ಮಾರ್ಗದ ಸುರತ್ಕಲ್ ಉಡುಪಿ ಕುಂದಾಪುರ ಮುರುಡೇಶ್ವರ ಗೋಕರ್ಣ ನಿಲ್ದಾಣಗಳಿಗೇ ಬುಕ್ ಆಗಿದ್ದು ಕಂಡು ಬಂತು.
ಪಡೀಲ್ ಬೈಪಾಸ್ ಮಾರ್ಗದಲ್ಲಿ ಕಾರವಾರ ಬೆಂಗಳೂರು ನಡುವೆ ರೈಲುಗಳಲ್ಲಿ ಪ್ರಯಾಣಿಕರು , ಇಂಜಿನ್ ರಿವರ್ಸ್ , ಪ್ಲಾಟ್ ಪಾರಂ ಕಾಯುವಿಕೆ ಸೇರಿದಂತೆ ಯಾವುದೇ ವಿಳಂಭವಿಲ್ಲದ ಕಾರಣ ಪಡೀಲ್ ಬೈಪಾಸ್ ಮಾರ್ಗದ ರೈಲುಗಳನ್ನು ಪ್ರಯಾಣಿಕರು ಆಯ್ಕೆ ಮಾಡುತಿದ್ದಾರೆ.
ಉಳಿದಂತೆ , 700 ಸೀಟುಗಳಲ್ಲಿ ಸುಮಾರು 200 ಸೀಟುಗಳು ಕುಕ್ಕೆ ಸುಬ್ರಮಣ್ಯ , ಬಂಟ್ವಾಳ, ಕಬಕ ಪುತ್ತೂರು ನಿಲ್ದಾಣಗಳಲ್ಲಿ ಬುಕ್ ಆಗಿದ್ದು ಕಂಡು ಬಂತು.
ಪಡೀಲ್ ಬೈಪಾಸ್ ಮಾರ್ಗದ ಚಳಿಗಾಲದ ಎರಡೂ ರೈಲುಗಳು ಯಶಸ್ವಿಯಾದ ಕಾರಣ, ಇನ್ನೂ ಹೆಚ್ಚು ರೈಲುಗಳನ್ನು ಕರಾವಳಿ ಮತ್ತು ಬೆಂಗಳೂರು ನಡುವೆ ಪಡೀಲ್ ಬೈಪಾಸ್ ಮೂಲಕ ಆರಂಭಿಸುವಂತೆ ಸುರತ್ಕಲ್ , ಮೂಲ್ಕಿ , ಉಡುಪಿ , ಕಾರವಾರ ಭಾಗದ ಪ್ರಯಾಣಿಕರ ಬೇಡಿಕೆ ಇದೆ ಎಂದು ಕುಂದಾಪುರ ಪೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಅದ್ಯಕ್ಷ ಗಣೇಶ್ ಪುತ್ರನ್ ತಿಳಿಸಿದ್ದಾರೆ.











