ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕು ನೇತೃತ್ವದಲ್ಲಿ ಇದೇ ಜ.25ರಂದು ಸಾಸ್ತಾನದಲ್ಲಿ ಬೃಹತ್ ಹಿಂದೂ ಸಂಗಮ ಏರ್ಪಡಿದ್ದು ಈ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಹಾಗೂ ಪೋಸ್ಟರ್ ಅನಾವರಣ ಕಾರ್ಯಕ್ರಮ ಭಾನುವಾರ ಪಾಂಡೇಶ್ವರ ನಂದಿಕೇಶ್ವರ ದೇಗುಲದಲ್ಲಿ ಜರಗಿತು.
ಈ ಕುರಿತು ಮಾತನಾಡಿದ ಸಮಿತಿಯ ಪ್ರಮುಖರಾದ ಸುರೇಂದ್ರ ಕೋಡಿ ದೇಶದ ಏಕತೆ ಮತ್ತು ಅಖಂಡತೆಗಾಗಿ ಹಿಂದೂ ಸಮುದಾಯದಲ್ಲಿ ಸಾಮರಸ್ಯದ ಜೀವನ ಒಂದೇ ಐಕ್ಯ ಮಂತ್ರ ಉದ್ದೇಶದಿಂದ ಹಿಂದೂ ಜಾಗೃತಿ ಸಂಗಮವನ್ನು ಪಕ್ಷಭೇದ ಮರೆತು ಎಲ್ಲೆಡೆ ಆಯೋಜಿಸಲಾಗುತ್ತಿದೆ. ಈ ಹಿನ್ನಲ್ಲೆಯಲ್ಲಿ ಸಾಸ್ತಾನದ ಶಿವಕೃಪಾ ಕಲ್ಯಾಣ ಮಂದಿರದಿಂದ ಬೃಹತ್ ಶೋಭಯಾತ್ರೆ ಕೈಗೊಂಡು ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‍ನಲ್ಲಿ ಹಿಂದೂ ಸಂಗಮ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇನ್ನೊರ್ವ ಪ್ರಮುಖರಾದ ಪಂಜು ಪೂಜಾರಿ ಯಡಬೆಟ್ಟು ಮಾತನಾಡಿ ರಾಜಕೀಯ ಹಿತಾಸಕ್ತಿ ಬದಿಗಿರಿಸಿ ಹಿಂದೂ ಸಮುದಾಯಯವನ್ನು ಒಗ್ಗೂಡಿಸುವ ಜತೆಗೆ ಜಾಗೃತ ಸಮಾಜಕ್ಕೆ ಮುನ್ನುಡಿ ಇಡಲಿದೆ ಎಂದು ಎಲ್ಲರೂ ಏಕ ಮನಸ್ಸಿನಿಂದ ಭಾಗಿಯಾಗಲು ಕರೆ ನೀಡಿದರು.
ಇದೇ ವೇಳೆ ಹಿಂದೂ ಸಂಗಮದ ಪೋಸ್ಟರ್‍ನ್ನು ಸಮಿತಿಯ ಪ್ರಮುಖರೊಂದಿಗೆ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ. ರಮೇಶ್ ರಾವ್ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಸ್ಥಳೀಯರಾದ ದಿನಕರ್ ಪಾಂಡೇಶ್ವರ, ನಾರಾಯಣ ಆಚಾರ್, ರವಿಕಿರಣ್ ಪಾಂಡೇಶ್ವರ, ರಘು ಪಾಂಡೇಶ್ವರ, ಸುರೇಶ್ ಪಾಂಡೇಶ್ವರ, ಗೋಪಾಲ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮಿತಿಯ ಸುರೇಶ್ ಪೂಜಾರಿ ನಿರ್ವಹಿಸಿದರು.











