ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಯಾವುದೇ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಮುಖ್ಯವಾಗಿ ಕಠಿಣ
ಪರಿಶ್ರಮ ಅಗತ್ಯ ಎಂದು ಅಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಎಂ. ಮೋಹನ್ ಆಳ್ವಾ ತಿಳಿಸಿದರು.
ಅವರು ಜ.15ರಂದು ವಂಡಾರಿನಲ್ಲಿ ಶ್ರೀ ಕೃಷ್ಣ ಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ನೂತನ ಘಟಕ ಶ್ರೀಕೃಷ್ಣಪ್ರಸಾದ್ ಆಗ್ರೋ ಪ್ರೈ.ಲಿ. ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಾಜಿ ಶಾಸಕ ಸುಕುಮಾರ್ ಶೆಟ್ಟಿಮಾತನಾಡಿ, ಕ್ಯಾಶ್ಯೂ ಉದ್ಯಮ ಕತ್ತಿಯ ಮೇಲಿನ ನಡಿಗೆ ರೀತಿಯಲ್ಲಿ ಕಠಿಣವಾದದ್ದು. ಆದರೆ ಈ ಉದ್ಯಮದಲ್ಲಿ ಇರುವಷ್ಟುಉದ್ಯೋಗವಕಾಶ ಹಾಗೂ
ಸಮಾಜದ ದುರ್ಬಲರಿಗೆ ಆಸರೆ ನೀಡಿದ ತೃಪ್ತಿ ಬೇರೆ ರಂಗದಲ್ಲಿ ಇಲ್ಲ ಎಂದರು.
ಸಂಸ್ಥೆಯ ಎಂ.ಡಿ. ಸಂಪತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆ ಕೇವಲ ಲಾಭ ಗಳಿಕೆಯ ಉದ್ದೇಶವನ್ನು ಮಾತ್ರವೇ ಇಟ್ಟುಕೊಳ್ಳದೇ ಲಾಭಾಂಶದಲ್ಲಿ ಸಮಾಜಮುಖಿ
ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭ ಹಾರೈಸಿದರು.
ಈ ಸಂದರ್ಭ ಸಂಸ್ಥೆ ಮುಖ್ಯಸ್ಥ ಸಂಪತ್ ಕುಮಾರ್ ಶೆಟ್ಟಿಯವರ ಉದ್ಯಮ ಗುರುಗಳಾದ ಉದ್ಯಮಿ ಶಂಕರ್ ಹೆಗ್ಡೆ, ಶಶಿಧರ್ ಶೆಟ್ಟಿಯವರನ್ನು ಸಮ್ಮಾನಿಸಲಾಯಿತು.
ಗುತ್ತಿಗೆದಾರರ ದಿನೇಶ್ ಹೆಗ್ಡೆ ಮೊಳಹಳ್ಳಿ, ಸಹಕಾರಿ ಕ್ಷೇತ್ರದ ಧುರೀಣ ಜಯಕರ ಶೆಟ್ಟಿ ಇಂದ್ರಾಳಿ, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವಸಂತ್ ಗಿಳಿಯಾರು, ನಾಗರಾಜ್ ಶೆಟ್ಟಿ, ಪುರೋಹಿತ
ಸುಧೀರ್ ಅಡಿಗ, ಕ್ಯಾಶ್ಯೂ ಸಂಸ್ಥೆಗಳ ಅಧ್ಯಕ್ಷರಾದ ಎ.ಕೆ.ರಾವ್, ಎಸ್.ಬಿ.ಐ. ಬ್ಯಾಂಕ್‍ನ ಪ್ರಮುಖ ಅಧಿಕಾರಿ ಕೃಷ್ಣಮೋಹನ್ ಇದ್ದರು.
ಪತ್ರಕರ್ತ ಕೆ.ಸಿ. ರಾಜೇಶ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು.











