ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಕೂಟ ಮಹಾಜಗತ್ತಿನ ಅಧಿದೇವರಾದ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಾರ್ಷಿಕ ರಥೋತ್ಸವ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು.
16ರಂದು ಪೂರ್ವಾಹ್ನ 11ಗ. ಮೀನ ಲಗ್ನದಲ್ಲಿ ಶ್ರೀ ಗುರುನರಸಿಂಹ ದೇವರ ರಥಾರೋಹಣ ಬೆಳಗ್ಗೆ ಪಾನಕ ಪನಿವಾರ ಸೇವೆಯನ್ನು ಐರೋಡಿ ಎ.ಪಿ. ವೈಕುಂತ ಕಾರಂತರ ಸ್ಮರಣಾರ್ಥ ಮಕ್ಕಳು ಹಾಗೂ ಬೆಂಗಳೂರಿನ ಕಿರಿನ ಓರ್ವಭಕ್ತರಿಂದ ನಡೆಯಲಿದ್ದು, ಕೆ.ವೈ. ಶ್ರೀಕಾಂತ ವಿಶ್ರಾಂತಿ ಭವನ, ಜಯನಗರ ಬೆಂಗಳೂರು ಇವರು ಮಧ್ಯಾಹ್ನ ಅನ್ನಸಂತರ್ಪಣೆ ಸೇವಾರ್ಥಿಗಳಾದರು.
ಸಂಜೆ 6-ಗ ರಥೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಪೂರ್ವಾಹ್ನದಿಂದ ದೇಗುಲದಲ್ಲಿ ಭಕ್ತರಮಹಾಪೂರ ಹರಿಬಂತು. ಸಂಜೆ ರಥೋತ್ಸವ ಆಂಜನೇಯ ದೇಗುಲದಿಂದ ಶ್ರೀ ದೇಗುಲವನ್ನು ತಲುಪಿತು. ನೆರಿದಿದ್ದ ನೂರಾರು ಭಕ್ತರು ರಥಕ್ಕೆ ಹಣ್ಣುಕಾಯಿ ಸಮರ್ಪಿಸಿಕೊಂಡರು.
ಸಂಜೆ ಓಲಗಮಂಟಪ ಸೇವೆ, ಅಷ್ಟಾವಧಾನ ಸೇವೆ, ಬಾಳೆಬೆಟ್ಟು ಎಂ. ಸೂರ್ಯನಾರಾಯಣ ಮಯ್ಯರ ಸ್ಮರಣಾರ್ಥ ಶ್ರೀಮತಿ ಮಯ್ಯ ಮತ್ತು ಮಕ್ಕಳು ಉಡುಪಿ ಇವರ ಸೇವೆಯಾಗಿ ಪಾನಕ ಪನಿವಾರ ಸೇವೆ ಜರಗಿತು.
ದಿ. ಪಾರಂಪಳ್ಳಿ ರಾಮಚಂದ್ರ ಐತಾಳರ ಶಿಷ್ಯ ವೃಂದದವರಿಂದ ವೀಣಾವಾದನ ನಡುವೆ ಶ್ರೀ ದೇವರಿಗೆ ಮಹಾಮಂಗಳಾರತಿ, ಭೂತಬಲಿ, ಶಯನೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಯುವವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗಸಂಸ್ಥೆ ಇವರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನೆರವೆರಿತು.
ದೇಗುಲದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ,ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೋಶಾಧಿಕಾರಿ ವೇ.ಮೂ.ಪರಾರಾಮ ಭಟ್ಟ, ಸದಸ್ಯರಾದ ವಿ.ವಿ. ಶ್ರೀಧರ ಕಾರಂತ, ಬೆಂಗಳೂರು. ಕೆ. ಆನಂತಪದ್ಮನಾಭ ಐತಾಳ, ಕೋಟ, ವೇ.ಮೂ.ಜಿ. ಚಂದ್ರಶೇಖರ ಉಪಾಧ್ಯ, ಗುಂಡ್ಮಿ, ಪಿ. ಸದಾಶಿವ ಐತಾಳ, ಕೃಷ್ಣಾಪುರ, ಮಂಗಳೂರು, ಆರ್.ಎಂ. ಶ್ರೀಧರ ರಾವ್ ಮೀಯಪದವು ಮಂಜೇಶ್ವರ, ಕೇರಳ ತಂತ್ರಿಗಳು, ಜೋಯಿಸರು, ಪವಿತ್ರವಾಣಿ, ದೇಗುಲದ ಆರ್ಚಕರು, ಉಪಾಧಿವಂತರು, ಗ್ರಾಮಮೊತ್ತೇಸರರು ಕೂಟ ಮಹಾಜಗತ್ತು ಸಾಲಿಗ್ರಾಮ ಶ್ರೀದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.











