ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕೇಂದ್ರ ಸರ್ಕಾರದ ಸಹಾಯಕ ಸಚಿವ ಸುರೇಶಗೋಪಿ ಕುಟುಂಬರೊಂದಿಗೆ ಶನಿವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
ಸಚಿವರನ್ನು ವಾದ್ಯ ಗೋಷ್ಠಿಗಳೊಂದಿಗೆ ಆಡಳಿತ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯರು ಹಾಗು ಪರ್ಯಾಯ ಅರ್ಚಕರಾದ ಶ್ರೀ ವ್ಯಾಸ ಉಪಾಧ್ಯಾಯ ಸಹೋದರರು ಆದರದಿಂದ ಬರಮಾಡಿಕೊಂಡು ವಿಶೇಷ ಗೌರವ ಪ್ರಸಾದವನ್ನು ನೀಡಿದರು.
ವಿಶ್ರಾಂತ ಆಡಳಿತ ಮೊಕ್ತೇಸರ ಸೂರ್ಯನಾರಾಯಣುಪಾಧ್ಯಾಯರು, ಆಡಳಿತ ಮಂಡಳಿ ಸದಸ್ಯರು, ಅರ್ಚಕ ಸಿಬ್ಬಂದಿ, ಭಕ್ತಾದಿಗಳು ಉಪಸ್ಥಿತರಿದ್ದರು.











