ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ 9ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆ ಮತ್ತು ಸಾಂಸ್ಕೃತಿಕ ವೈಭವ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸಂಘಟನೆಗಳು ಸಮಾಜ ಹಾಗೂ ಸಮುದಾಯದ ಆಸ್ತಿಯಾಗಿ ಕಾರ್ಯನಿರ್ವಹಿಸಬೇಕು ಇದಕ್ಕೆ ಯುವ ವೇದಿಕೆಯ ಒಂಭತ್ತು ವರ್ಷಗಳ ಸಾಮಾಜಿಕ ಕಾರ್ಯಗಳೇ ಸಾಕ್ಷಿ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಅಭಿಪ್ರಾಯಪಟ್ಟರು.
ಶುಕ್ರವಾರ ಸಾಲಿಗ್ರಾಮದ ಶ್ರೀ ಗುರುನರಸಿಂಹ ಬಯಲು ರಂಗಮಂದಿರದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ 9ನೇ ವರ್ಷದ ವಾರ್ಷಿಕೋತ್ಸವ, ಗೌರವ ಸನ್ಮಾನ, ವಿದ್ಯಾನಿಧಿ ವಿತರಣೆ ಮತ್ತು ಸಾಂಸ್ಕೃತಿಕದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಶಮಾನೋತ್ಸವ ಹೊಸ್ತಿಲ್ಲಲ್ಲಿರುವ ಈ ಸಂಸ್ಥೆ ಇನ್ನಷ್ಟು ಸಾಮಾಜಿಕ ಯೋಜನೆಗಳನ್ನು ನೀಡಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು.
ಸಾಲಿಗ್ರಾಮ ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ಶುಭಶಂಸನೆಯನ್ನು ಗೈದರು.
ನಿವೃತ್ತ ಪ್ರಾಂಶುಪಾಲ ಡಾ| ಕೆ. ಜಗದೀಶ್ ಹೊಳ್ಳ, ಸಮಾಜಸೇವಕ ಬಿ. ಸುರೇಶ್ ಅಡಿಗ ಬಾಳ್ಕದ್ರು ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ಶೇಖರ್ ಆಸ್ಪತ್ರೆಯ ಮುಖ್ಯಸ್ಥ ಡಾ| ಪಿ. ವಿಷ್ಣುಮೂರ್ತಿ ಐತಾಳ್, ಹೋಟೆಲ್, ಅಘೋರೇಶ್ವರ ದೇಗುಲದ ಧರ್ಮದರ್ಶಿ ಚಂದ್ರಶೇಖರ ಕಾರಂತ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮಿತಿಯ ಸದಸ್ಯ ರಾಜೇಶ ಕಾರಂತ, ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ, ಕೂಟಮಹಾಜಗತ್ತು ಅಂಗಸಂಸ್ಥೆಯ ಅಧ್ಯಕ್ಷ ಪಿ. ಚಂದ್ರಶೇಖರ ಹೊಳ್ಳ, ಕೃಷಿಕ ಪಿ. ರಘು ಮಧ್ಯಸ್ಥ ಪಾರಂಪಳ್ಳಿ, ಯುವ ವೇದಿಕೆಯ ಗೌರವ ಸಲಹೆಗಾರ ಕೆ. ತಾರನಾಥ ಹೊಳ್ಳ, ಸಂಸ್ಥೆಯ ಮಾರ್ಗದರ್ಶಕ ಪಿ. ಮಂಜುನಾಥ ಉಪಾಧ್ಯ, ಕೂಟ ಮಹಾಜಗತ್ತು ಕೇಂದ್ರಿಯ ವಲಯ-1ರ ಸಂಘಟನಾ ಕಾರ್ಯದರ್ಶಿ ಶ್ರೀಪತಿ ಅಧಿಕಾರಿ, ಯುವ ವೇದಿಕೆಯ ನಿಯೋಜಿತ ಅಧ್ಯಕ್ಷ ಪಿ. ಸಚಿನ್ ಹೇರ್ಳೆ, ಕೋಶಾಧಿಕಾರಿ ರವಿರಾಜ ಉಪಾಧ್ಯಾ ಉಪಸ್ಥಿತರಿದ್ದರು.
ಇದೇ ವೇಳೆ ಡಾ.ಬಾಲಕೃಷ್ಣ ನಕ್ಷತ್ರಿ ಹಾಗೂ ಪಿ. ಸದಾಶಿವ ಮಧ್ಯಸ್ಥ ಇವರ ವತಿಯಿಂದ ವಿದ್ಯಾನಿಧಿ ಆಯ್ದ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಯುವ ವೇದಿಕೆಯ ಗೌರವಾಧ್ಯಕ್ಷ ಪಿ.ವೈ. ಕೃಷ್ಣಪ್ರಸಾದ್ ಹೇರ್ಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯುವ ವೇದಿಕೆಯ ಕಾರ್ಯದರ್ಶಿ ಶ್ರೀಕಾಂತ ಐತಾಳ್ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಗೌರವ ಸಲಹೆಗಾರ ಕೆ. ಶಶಿಧರ ಮಯ್ಯ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ಸುಧೀಂದ್ರ ಐತಾಳ್ ವಂದಿಸಿದರು.
ಕಾರ್ಯಕ್ರಮದ ನಂತರ ಪಿಂಗಾರ್ ಕಲಾವಿದರ್ ಬೆದ್ರ ಇವರಿಂದ ಕದಂಬ ನಾಟಕ ಪ್ರದರ್ಶನಗೊಂಡಿತು.











