ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸಂಪನ್ನಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ರ್ಯಾಲಿ

0
251

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕಿರಿಮಂಜೇಶ್ವರ: ಬೈಂದೂರು ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ರ್ಯಾಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಜನವರಿ 17ರಂದು ಬಹಳ ಅದ್ದೂರಿಯಾಗಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ನರಸಿಂಹ ದೇವಾಡಿಗ ಅವರು ವಹಿಸಿಕೊಂಡಿದ್ದು ನಾಯಕತ್ವ ಪ್ರತಿಭೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯಾಗಿದೆ. ಜೊತೆಗೆ ಉತ್ತಮ ನಾಗರೀಕರನ್ನಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತದೆ ಎಂದು ಹೇಳಿದವರು.

ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಪೂಜಾರಿಯವರು ಉಪಸ್ಥಿತರಿದ್ದು ಜೀವನದಲ್ಲಿ ಕೌಶಲ್ಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದಂತಹ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಾವಲಂಬನೆಯನ್ನು ಬೆಳೆಸುತ್ತದೆ ಎಂದು ಹೇಳಿದರು.

Click Here

ರ್ಯಾಲಿಯ ಪಕ್ಷಿ ನೋಟವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಮಂಜುನಾಥ್ ಹೆಗಡೆಯವರು ಪ್ರಸ್ತುತಪಡಿಸಿದರು.

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ಜನತ ಪದವಿಪೂರ್ವ ಸಂಸ್ಥೆ ಹೆಮ್ಮಾಡಿ ಇದರ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಉದಯ ನಾಯ್ಕ್, ಇಲಾಖೆಯ ಅಧಿಕಾರಿಗಳದ ಉದಯ್ ಕುಮಾರ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಸುಮಂಗಲ, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ಸಂಯೋಜಕ ಸುಬ್ರಹ್ಮಣ್ಯ ಮರಾಠೆ ಉಪಸ್ಥಿತರಿದ್ದರು.

ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರದಿಂದ ನಾವುಂದದವರೆಗೆ ನಡೆದ ರ್ಯಾಲಿಗೆ ಬೈಂದೂರು ತಾಲೂಕು ದೈಹಿಕ ಶಿಕ್ಷಣಪರಿವೀಕ್ಷಣಾಧಿಕಾರಿಗಳಾದಂತಹ ವಿಜಯಕುಮಾರ್ ಶೆಟ್ಟ ಇವರು ಚಾಲನೆಯನ್ನು ನೀಡಿದರು. ರ್ಯಾಲಿಯಲ್ಲಿ ಪ್ಲಾಸ್ಟಿಕ್ ಬಳಕೆಯ ಪರಿಣಾಮ ಪರಿಸರ ಮಾಲಿನ್ಯವನ್ನು ತಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೆ ಇನ್ನೂ ಹಲವಾರು ಪರಿಸರ ಜಾಗೃತಿಗಳನ್ನು ಮೂಡಿಸುವಂತಹ ಘೋಷಣೆಯೊಂದಿಗೆ ವಿದ್ಯಾರ್ಥಿಗಳ ದಂಡು ಸಾಗಿ ಬಂದಿತು.
ರ್ಯಾಲಿಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದಂತಹ ಶ್ರೀ ಗಣೇಶ ಮೊಗವೀರರವರು ಶುಭಹಾರೈಸಿದರು.

ರ್ಯಾಲಿಯಲ್ಲಿ ಮೂಕಾಂಬಿಕಾ ಹೈಸ್ಕೂಲ್ ಕೊಲ್ಲೂರು, ಯಸ್‌ ಡಿ ಎಂ ಮೈಯಾಡಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆ, ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ನಾಗೂರು, ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರ ಹೀಗೆ ಬೇರೆ ಬೇರೆ ಶಾಲೆಯ ಸುಮಾರು 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಶಿಕ್ಷಕರ ಶಿಕ್ಷಕಿಯರು ಬಹಳ ಲವಲವಿಕೆಯಿಂದ ಇದರಲ್ಲಿ ಭಾಗವಹಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಮುಖವಾಡ ತಯಾರಿಕೆ, ಹೂಗುಚ್ಚ ತಯಾರಿಕೆ , ಬೆಂಕಿ ರಹಿತ ಅಡುಗೆ ತಯಾರಿಕೆ, ಹಾಗೆ ದ್ವಿತೀಯ ಸೋಪಾನದ ಪದಕ ತಯಾರಿಕೆಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸುಮಂಗಲ ನಿರೂಪಿಸಿ, ಉದಯಕುಮಾರ್ ಸ್ವಾಗತಿಸಿ, ಅನಿತಾ ವಂದಿಸಿದರು.

Click Here

LEAVE A REPLY

Please enter your comment!
Please enter your name here