ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪರಿಸರದ ಬಗ್ಗೆ ಕಾಳಜಿ ಅತ್ಯಗತ್ಯ ಆದರೆ ಪ್ರಸ್ತುತ ನಿರ್ಲಕ್ಷ್ಯ ಅತಿಯಾಗಿ ಕಾಡುತ್ತಿದೆ ಇದು ಸರಿಯಲ್ಲ ಮುಂದಿರುವ ದಿನಗಳು ಕ್ಲಿಷ್ಟಕರ ಎಂದು ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಅಧ್ಯಕ್ಷ ಕೆ. ರಮೇಶ್ ಪ್ರಭು ಹೇಳಿದರು.
ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್ ಹಾಗೂ ಚಿತ್ತಾರಿ ದೇಗುಲದ ಸಹಯೋಗದೊಂದಿಗೆ 287 ನೇ ಭಾನುವಾರದ ಅಂಗವಾಗಿ ಮಣೂರು ಚಿತ್ತಾರಿ ನಾಗಬ್ರಹ್ಮ ದೇಗುಲದ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿ ದಿನದಿಂದ ದಿನಕ್ಕೆ ಪರಿಸರದ ಮೇಲೆ ಮನುಕುಲ ಹಾನಿಯುಂಟು ಮಾಡುತ್ತಿದ್ದಾನೆ. ಪ್ಲಾಸ್ಟಿಕ್ ತ್ಯಾಜ್ಯಗಳು ಮನುಕುಲ ಸೇರಿದಂತೆ ಪ್ರಾಣಿ ಪಕ್ಷಿಗಳಿಗೂ ಸಂಚಕಾರ ತಂದೊಡ್ಡುತ್ತಿವೆ. ಹೀಗಾದರೆ ಮುಂದಿನ ದಿನಗಳು ಆಪತ್ತು ತಪ್ಪಿದಲ್ಲ ಈಗಲೇ ಜಾಗೃತರಾಗಿ ಎಂದು ಕರೆಕೊಟ್ಟರು.
ದೇಗುದ ಪ್ರಮುಖರಾದ ಗೋಪಾಲ್ ಪೈ, ಪಂಚವರ್ಣ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಮಣೂರು ಫ್ರೆಂಡ್ಸ್ ಸುರೇಶ್ ಆಚಾರ್ ಸೇರಿದಂತೆ ಹಲವರು ಇದ್ದರು.
ಇದೇ ಜ.24ರ ಶನಿವಾರ ಮಣೂರು ಚಿತ್ತಾರಿ ನಾಗಬ್ರಹ್ಮ ಸಪರಿವಾರ ದೇಗುಲದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಜರಗಲಿದೆ. ವಿವಿಧ ಧಾರ್ಮಿಕ ಅಪರಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಲಿದೆ.











