ಕುಂದಾಪುರ ಮಿರರ್ ಸುದ್ದಿ…
ಬ್ರಹ್ಮಾವರ: ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿವಿಧ ವಯೋಮಾನದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ , ಬಾಲಕಿಯರು ಮತ್ತು ಮಹಿಳೆಯರಿಗೆ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಸ್ಪೋರ್ಟ್ಸ್ ಕ್ಲಬ್ಬಿನ ಬೈಕಾಡಿ ಸಲ್ವಡೋರ್ ನೋರನ್ಹಾ ರವರ ಈಜುಕೊಳದಲ್ಲಿ ಜರಗಿತು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭುಜಂಗ್ ಶೆಟ್ಟಿ ಅವರು ಸ್ಪರ್ಧೆಯನ್ನು ಉದ್ಘಾಟಿಸುತ್ತಾ ಈಜು ಮಕ್ಕಳಿಗೆ ಆತ್ಮಸ್ಥೈರ್ಯ ವನ್ನ ನೀಡುವುದಲ್ಲದೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತಿ ಅಗತ್ಯ ಎಂದು ಹೆತ್ತವರು ಮತ್ತು ಸ್ಪರ್ದಾಳುಗಳನ್ನು ಉದ್ದೇಶಿಸಿ ಮಾತನಾಡಿದರು.
ಉಡುಪಿಯ ಸಾಫಲ್ಯ ಟ್ರಸ್ಟ್‌ನ ಪ್ರವರ್ತಕರು ಮತ್ತು ಸಮಾಜ ಸೇವೆಕಿಯಾದ ನಿರೂಪಮ ಪ್ರಸಾದ್ ಶೆಟ್ಟಿ ಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ಮೊಬೈಲ್ ನಿಂದ ದೂರ ಇದ್ದು ತಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವಂತಹ ಆಟೊಟ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಲ್ಲದೆ ತಮ್ಮ ಕೌಶಲ್ಯ ಭರಿತ ಜೀವನವನ್ನು ರೂಪಿಸಿಕೊಳ್ಳಬೇಕು ಮತ್ತು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಕ್ರೀಡಾ ಪ್ರೇಮಿಗಳಿಗೆ ಇರುವಂತಹ ವ್ಯವಸ್ಥೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಬಿಜು .ಜಿ. ನಾಯರ್ ಅವರು ಅಧ್ಯಕ್ಷತೆ ವಹಿಸಿ ಶಾಲಾ ಪರೀಕ್ಷೆಯ ಮಧ್ಯೆಯು ಕೂಡ ಸ್ಪರ್ಧೆಗೆ ಆಗಮಿಸಿದ ನೂರಾರು ಸ್ಪರ್ದಾಳುಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.
ಗೌರವಾಧ್ಯಕ್ಷರಾದ ಚಂದ್ರಶೇಖರ್ ಹೆಗ್ಡೆಯವರು ಸ್ವಾಗತಿಸಿ , ಕಾರ್ಯದರ್ಶಿಗಳಾದ ಮೇಜರ .ಜಿ .ಬಾಲಕೃಷ್ಣ ಶೆಟ್ಟಿ ಅವರು ಧನ್ಯವಾದ ಸಮರ್ಪಣೆ ಮಾಡಿದರು. ಖಜಾಂಜಿ ಯವರಾದ ವಿಕ್ರಂ ಪ್ರಭುಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.











