ವಕ್ವಾಡಿ :ಗುರುಕುಲ ವಿದ್ಯಾಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

0
155

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಅಂಗ-ಸಂಸ್ಥೆಗಳಾದ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ಜಂಟಿಯಾಗಿ ಆಚರಿಸಿತು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಅವರು ಧ್ವಜಾರೋಹಣಗೈದು ಮಾತನಾಡುತ್ತಾ 1950ರ ಜನವರಿ 26ರಂದು ಭಾರತವು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು ಸ್ವಾತಂತ್ರ್ಯರ ಜೊತೆಗೆ ಸ್ವಾಭಿಮಾನ ಸಮಾನತೆ ಮತ್ತು ನ್ಯಾಯವೆಂಬ ಮೌಲ್ಯಗಳನ್ನು ರಾಷ್ಟ್ರದ ಅಡಿಪಾಯವನ್ನಾಗಿ ಮಾಡಿತು. ಇಂತಹ ಪರಿಕಲ್ಪನೆಯಿಂದ ಹುಟ್ಟಿದ ಸಂವಿಧಾನವನ್ನು ಬೆಳೆಸಿ ಉಳಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದರು.

Click Here

ಪ್ರಾಂಶುಪಾಲರಾದ ರೂಪಾ ಶೆಣೈ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಅಂಬೇಡ್ಕರ್ ಅವರು ಕೊಟ್ಟಂತಹ ಸಂವಿಧಾನದ ರೀತಿ ನೀತಿಗಳು ಅಮೂಲ್ಯವಾದದು. ಭಾರತೀಯರಾದ ನಾವು ಒಂದೇ ಭಾವದಿಂದ ದೇಶದ ಒಳಿತಿಗಾಗಿ ದುಡಿಯಬೇಕೆಂದರು.

ವಿದ್ಯಾರ್ಥಿನಿ ತನುಷಿ ಕಾರ್ಯಕ್ರಮವನ್ನು ನಿರೂಪಿಸಿ, ಮಾನ್ಯ ಸ್ವಾಗತಿಸಿದರೆ, ಹವಿಶಾ ವಂದಿಸಿದರು.

Click Here

LEAVE A REPLY

Please enter your comment!
Please enter your name here