ಗುರುಕುಲ ಶಾಲೆಯಲ್ಲಿ ಕಾರ್ನಿವಲ್ ಸಂಭ್ರಮ, ಮಕ್ಕಳ ಹಬ್ಬದಲ್ಲಿ ಆಕರ್ಷಿಸಿದ ರವಿಯಣ್ಣ….

0
343

Click Here

Click Here

ಸು ಫ್ರಮ್ ಸೋ ಚಿತ್ರದ ಹಾಡಿಗೆ ಮಕ್ಕಳೊಂದಿಗೆ ಕುಣಿದು ಕುಪ್ಪಳಿಸಿದ ಶನಿಲ್‌ ಗೌತಮ್ | ಚಿತ್ರದ ಡೈಲಾಗ್ ಗೆ ಫಿದಾ ಆದ ಮಕ್ಕಳು, ಪೋಷಕರು, ಶಿಕ್ಷಕರು..

ಕುಂದಾಪುರ ಮಿರರ್ ಸುದ್ದಿ…


ಕುಂದಾಪುರ : ವಿದ್ಯಾಸಂಸ್ಥೆಯಲ್ಲಿ ಸಿಕ್ಕಿರುವ ವಿದ್ಯಾಭ್ಯಾಸ ಮತ್ತು ಜೀವನ ಮೌಲ್ಯಗಳು ಜೀವನದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ನಾವು ಮಾಡುವ ಕೆಲಸದಲ್ಲಿ ಖುಷಿ ಇದೆ, ಸಂತೋಷ ಇದೆ ಅಂದರೆ ಅದನ್ನೇ ಮಾಡಬೇಕು. ಅದು ತಪ್ಪು ಕೆಲಸ ಬಿಟ್ಟು ಒಳ್ಳೆ ಕೆಲಸದಲ್ಲಿ ಮಾತ್ರ ಇರಬೇಕು. ತಪ್ಪು, ಒಳ್ಳೆ ಕೆಲಸದ ಅರಿವನ್ನು ಮಕ್ಕಳಿಗೆ ಪೋಷಕರು ನೀಡಬೇಕು. ಮಕ್ಕಳನ್ನು ಮಾಕ್ರ್ಸ್ ಕಾರ್ಡ್ ಹಿಂದೆ ಅಥವಾ ಸ್ಪರ್ಧಾತ್ಮಕ ಯುಗದ ಹಿಂದೆ ಕಮಾಂಡೊ ತರಹ ಬೆಳೆಸಬಾರದು. ಮಕ್ಕಳಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟರೆ ಅವರು ಯಶಸ್ಸಿನ ಶಿಖರವನ್ನೇರಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಒತ್ತಡ ಹೇರಬಾರದು. ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಗಮನ ಕೇಂದ್ರಿಕರಿಸಿ ಮುನ್ನಡೆದರೆ ನಮಗೆ ಯಶಸ್ಸು ದೊರೆಯುತ್ತದೆ ಎಂದು ರವಿ ಅಣ್ಣ ಎಂದು ಪ್ರಸಿದ್ಧರಾಗಿರುವ ಚಲನಚಿತ್ರ ನಟ ಶನಿಲ್ ಗೌತಮ್ ಹೇಳಿದರು.

Click Here

ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ವಠಾರದಲ್ಲಿ ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್ ಪ್ರಾಯೋಜಿತ ಗುರುಕುಲ ಪಬ್ಲಿಕ್ ಸ್ಕೂಲ್ ಮತ್ತು ಗುರುಕುಲ ಪದವಿಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಲಾದ ವಿನೂತನವಾದ ಒಂದು ದಿನದ ಮಕ್ಕಳ (ಗುರುಕುಲ ಕಾರ್ನಿವಲ್) ಹಬ್ಬವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಸಿನಿಮಾ ನೋಡಿ ಅದನ್ನು ಮೆಚ್ಚಿ ಅದರಲ್ಲಿರುವ ಪಾತ್ರವನ್ನು ಹಚ್ಚಿಕೊಂಡು ಅದೇ ಪಾತ್ರದಲ್ಲಿ ಒಬ್ಬ ಕಲಾವಿದನನ್ನು ಅದೇ ಹೆಸರಿನಲ್ಲಿ ಕರೆಯುತ್ತಿರುವುದು ನನಗೆ ಸಂದಿರುವ ಭಾಗ್ಯ ಮತ್ತು ಅದೃಷ್ಟ ಎಂದು ಅವರು ಹೇಳಿದರು. ಸೂ ಫ್ರಮ್ ಸೋ ಚಲನಚಿತ್ರದ ಹಾಡಿಗೆ ಶಾಲೆಯ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಅವರು ನರ್ತಿಸಿ ಗಮನ ಸೆಳೆದರು.
ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಂಡ್ಯ ಎಜ್ಯುಕೇಶನಲ್ ಟ್ರಸ್ಟ್‍ನ ಜಂಟಿ ಕಾರ್ಯನಿರ್ವಾಹಕ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಗುರುಕುಲು ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಾ.ರೂಪಾ ಶೆಣೈ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಸಂಧ್ಯಾ ಅತಿಥಿಯನ್ನು ಪರಿಚಯಿಸಿದರು. ಶಿಕ್ಷಕಿಯರಾದ ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ, ಸುಷ್ಮಾ ಎಸ್. ವಂದಿಸಿದರು.
ಮಕ್ಕಳ (ಗುರುಕುಲ ಕಾರ್ನಿವಲ್) ಹಬ್ಬದಲ್ಲಿ ಮೂರರಿಂದ ಐದು ವರ್ಷದ ಪುಟಾಣಿಗಳಿಗೆ ಪ್ರಿನ್ಸ್ ಮತ್ತು ಪ್ರಿನ್‍ಸೆಸ್ ಸ್ಪರ್ಧೆ, ಗೋಲ್ಡನ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್ ಮಾಡಿದ ವಿದೂಷಿ ದೀಕ್ಷಾ ಅವರ ನಾಟ್ಯ ಪ್ರದರ್ಶನ, ಕುದ್ರೋಳಿ ಗಣೇಶ್ ಅವರಿಂದ ಜಾದು ಪ್ರದರ್ಶನ ನಡೆಯಿತು. ಸುಮಾರು 50ಕ್ಕೂ ಮಿಕ್ಕಿ ಮಕ್ಕಳ ಹಾಗೂ ಪೋಷಕರ ಆಹಾರ ಮಳಿಗೆಗಳು, ವೈವಿಧ್ಯಮಯ ಮಳಿಗೆಗಳು, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ನೀಡುವ ಉದ್ದೇಶದಿಂದ ವಿಶೇಷ ಆಕರ್ಷಣೆಯ ಬೇಬಿ ಶಾರ್ಕ್ ಟ್ಯಾಂಕ್, ಫೇಸ್ ಪೈಟಿಂಗ್, ರೋಬೋಟಿಕ್ ಕಾರ್ನರ್, ಗಾಳಿಪಟ ಮಾಡುವ ಮತ್ತು ಹಾರಿಸುವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಸಾಹಸ ಮನೋಭಾವಕ್ಕೆ ಅನುಗುಣವಾಗಿ ಬೆಂಗಳೂರಿನಿಂದ ವಿಶೇಷ ತರಬೇತಿ ಪಡೆದ ತಂಡದಿಂದ ಸಾಹಸ ಕ್ರೀಡೆಗಳಾದ ಕ್ಲೈಬಿಂಗ್ ವಾಲ್, ಬರ್ಮಾ ಬ್ರಿಡ್ಜ್, ಬರ್ಮಾ ಲೂಪ್ಸ್, ಬ್ಯಾಲೆನ್ಸ್ ಬೀಮ್, ನೆಟ್ ಕ್ಲೈಬಿಂಗ್, ಪ್ಯಾರಲಲ್ ರೋಪ್, ಜಿಪ್ ಲೈನ್ ಮೊದಲಾದವುಗಳನ್ನು ನಡೆಯಿತು. ಪೋಷಕರ ಕನಸು, ಮಕ್ಕಳ ಸಂಭ್ರಮ ಮತ್ತು ಶಾಲೆಯ ಮೌಲ್ಯಗಳ ಸಂಯೋಜನೆಯಾಗಿ, ಶಿಕ್ಷಕರು, ಕಛೇರಿ ಸಿಬ್ಬಂದಿಗಳು, ಮಕ್ಕಳು, ಪೋಷಕರನ್ನು ಒಳಗೊಂಡ ಸಂಸ್ಕøತಿಜನ್ಯವಾದ ಸಾಂಸ್ಕøತಿಕ ಸಮ್ಮಿಲನದಿಂದ ಕೂಡಿದ ವಿಶಿಷ್ಟ ಕಾರ್ಯಕ್ರಮವಾಗಿ ಮಕ್ಕಳ (ಗುರುಕುಲ ಕಾರ್ನಿವಲ್) ಹಬ್ಬ ಮೂಡಿ ಬಂದಿತು.

Click Here

LEAVE A REPLY

Please enter your comment!
Please enter your name here