ಜಪ್ತಿ: ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಸೆರೆ

0
397

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :
ಅರಣ್ಯ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯೊಂದನ್ನು ಸೆರೆಹಿಡಿದ ಘಟನೆ ಶನಿವಾರ ಕಂದಾವರ ಗ್ರಾಮಪಂಚಾಯತ್ ವ್ಯಾಪ್ತಿಯ ಜಪ್ತಿಯ ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಶುದ್ಧೀಕರಣ ಯೋಜನೆಯ ಘಟಕದ ಆವರಣದಲ್ಲಿ ನಡೆದಿದೆ.

Click Here


ಕುಂದಾಪುರ ಪುರಸಭೆಯ ಶುದ್ಧ ಕುಡಿಯುವ ನೀರಿನ ಘಟಕದ ಆವರಣದಲ್ಲಿ ಚಿರತೆಗಳ ಓಡಾಟ ಕಂಡ ಇಲ್ಲಿನ ಸಿಬ್ಬಂದಿ ಜ.14 ಶುಕ್ರವಾರ ರಾತ್ರಿ ನೀಡಿದ ಮಾಹಿತಿಯಂತೆ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರು ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿದ್ದು ಸೆರೆ ಹಿಡಿಯುವ ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆ ಶನಿವಾರದಂದು ಕಾರ್ಯಾಚರಣೆ ನಡೆಸಿದೆ‌.

ಇನ್ನು ಸುಮಾರು 10 ಗಂಟೆಗೆ ಕಾರ್ಯಾಚರಣೆಗೆ ಆಗಮಿಸಿದ ಅಧಿಕಾರಿಗಳ ತಂಡ ಕೆಲವೇ ಗಂಟೆಯಲ್ಲಿ ಒಂದು ಮರಿ ಚಿರತೆಯನ್ನು ಸೆರೆ ಹಿಡಿದಿದೆ. ಈ ವೇಳೆ ಇನ್ನೊಂದು ಚಿರತೆ ಮರಿ ತಪ್ಪಿಕೊಂಡಿದೆ ಎನ್ನಲಾಗಿದೆ.

Click Here

LEAVE A REPLY

Please enter your comment!
Please enter your name here