ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಆಸ್ತಿ, ಐಶ್ವರ್ಯ ಎಷ್ಟಿದ್ದರೂ, ಎಲ್ಲರಿಗೂ ಆರೋಗ್ಯ ಹಾಗೂ ನೆಮ್ಮದಿ ಬಹಳ ಮುಖ್ಯ. ಈ ವೆಂಕಟಲಕ್ಷ್ಮಿ ರೆಸಿಡೆನ್ಸಿಯಲ್ಲಿ ನೆಲೆಸುವ ಎಲ್ಲರಿಗೂ ದೇವರು ಆರೋಗ್ಯ ಹಾಗೂ ನೆಮ್ಮದಿಯನ್ನು ಕರುಣಿಸಲಿ, ಬ್ರಾಹ್ಮಣರ ಅಗ್ರಹಾರದಂತೆ, ಚಂದ್ರಶೇಖರ ಐತಾಳರು ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದವರಿಗೂ ಸಮುಚ್ಛಯ ನಿರ್ಮಿಸುವಂತಾಗಲಿ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
Video :-









ಅವರು ರವಿವಾರ ಹಂಗಳೂರಿನಲ್ಲಿ ನಿರ್ಮಿಸಿದ ವೆಂಕಟಲಕ್ಷ್ಮೀ ರೆಸಿಡೆನ್ಸಿ (ಬ್ರಾಹ್ಮಣರ ಅಗ್ರಹಾರ) ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಚಂದ್ರಶೇಖರ ಐತಾಳರು ಸಾತ್ವಿಕ ಮನಸ್ಸಿನವರಾಗಿದ್ದು, ಪರೋಪಕಾರ, ಸತ್ಕಾರ, ಪರರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದವರು. ವಿಪ್ರ ಬಾಂಧವರ ಆಚಾರ- ವಿಚಾರಗಳಿಗೆ ದಕ್ಕೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಅಗ್ರಹಾರವನ್ನು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯದವರಿಗೂ ಅನುಕೂಲವಾಗುವಂತಹ ವಸತಿ ಸಮುಚ್ಛಯವನ್ನು ಆರಂಭಿಸಲಿ, ಈ ಉದ್ಯಮ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಶುಭಹಾರೈಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಶಶಿಕುಮಾರ್ ರೈ, ರಾಜು ಪೂಜಾರಿ, ಮಹೇಶ ಹೆಗ್ಡೆ ಮೊಳ್ಳಹಳ್ಳಿ, ಗಣೇಶ ಶೆಟ್ಟಿ ಮೊಳಹಳ್ಳಿ, ಮಾರ್ಕೋಡು, ಚಾಟರ್ಡ್ ಅಕೌಂಟೆಂಟ್ ಪಿ. ನರೇಂದ್ರ ಪೈ ಮಂಗಳೂರು, ಹಂಗಳೂರು ಗ್ರಾ.ಪಂ. ಅಧ್ಯಕ್ಷ ಆನಂದ ಪೂಜಾರಿ, ಪಿಡಿಒ ರಾಜೇಶ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರದ ತಂತ್ರಿ ಹಾಗೂ ಪ್ರಧಾನ ಅರ್ಚಕ ಪ್ರಸನ್ನಕುಮಾರ ಐತಾಳ, ವೇ| ಮೂ| ರಾಮಕೃಷ್ಣ ಭಟ್ ಕಜ್ಕೆ, ಶ್ರೀ ಚಿಕ್ಕಮಹಾಲಿಂಗೇಶ್ವರ ದೇವಸ್ಥಾನ ಹಂಗಳೂರಿನ ಅರ್ಚಕ ಎಚ್.ವಿಜಯಕುಮಾರ ಐತಾಳ, ಕುಂದಪ್ರಭ ಸಂಪಾದಕ ಯು. ಎಸ್. ಶೆಣೈ, ಸುಬ್ರಾಯ ಭಟ್ ಹಾಸನ, ಹಂಗಳೂರು ವೆಂಕಟಲಕ್ಷ್ಮೀ ಬಿಲ್ಡರ್ಸ್‍ನ ಡೈರೆಕ್ಟರ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಹೇಮಾವತಿ ಮತ್ತು ಚಂದ್ರಶೇಖರ ಐತಾಳ್ ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭದಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಎ.ಜಿ. ಅಸೋಸಿಯೇಟ್ಸ್ ಉಡುಪಿಯ ಚೀಫ್ ಆರ್ಕಿಟೆಕ್ಟ್ ಗೋಪಾಲ ಭಟ್ ಅವರನ್ನು ಸಮ್ಮಾನಿಸಲಾಯಿತು.
ಚಂದ್ರಶೇಖರ ಐತಾಳ್ ಪುತ್ರಿ ಶ್ರೀಲತಾ ಐತಾಳ್ ಸ್ವಾಗತಿಸಿ, ಲಕ್ಷ್ಮಿ ಐತಾಳ್ ವಂದಿಸಿದರು. ತೆಂಕನಿಡಿಯೂರು ಸರಕಾರಿ ಪ.ಪೂ.ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.











