ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಸಮುದ್ಯತಾ ಗ್ರೂಪ್ಸ್ ಕೋಟ, ಜೆಸಿಐ ಕೋಟ ಸಿನಿಯರ್ ಲಿಜನ್, ಹಂದಟ್ಟು ಮಹಿಳಾ ಬಳಗದ ಸಹಯೋಗದೊಂದಿಗೆ ತೆಕ್ಕಟ್ಟೆ ಗ್ರಾಮಪಂಚಾಯತ್, ಎಸ್ ಎಲ್ ಆರ್ ಎಂ ಘಟಕ ಇವರ ಸಂಯೋಜನೆಯೊಂದಿಗೆ ಬೀಚ್ ಕ್ಲಿನಿಂಗ್ ಭಾಗವಹಿಸಿ ಬಹುಮಾನ ಗೆಲ್ಲಿ ಎಂಬ ವಿನೂತನವಾಗಿ ಬೀಚ್ ಕ್ಲಿನಿಂಗ್ ಅಭಿಯಾನ ಭಾನವಾರ ತೆಕ್ಕಟ್ಟೆ ಗ್ರಾ.ಪಂ ಕೊಮೆ ಹಮ್ಮಿಕೊಂಡಿತು.
ಒಂದು ಹೊಸ ಜಾಗೃತಿ ಮೂಡಿಸುವ ಸಲುವಾಗಿ ಬೀಚ್ ಕ್ಲಿನಿಂಗ್ ನಲ್ಲಿ ಭಾಗಿಯಾಗಿ ಬಹುಮಾನ ಗೆಲ್ಲಿ ಎಂಬ ಹೊಸ ಯೋಚನೆ ಯೋಜನೆ ಕೈಗೆಟ್ಟುಕುವಂತೆ ಮಾಡಿತು. ಯುವ ಸಮುದಾಯದಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ತುಡಿತದೊಂದಿಗೆ ಈ ಯೋಜನೆಯನ್ನು ಪಂಚವರ್ಣ ಸಂಘಟನೆ ಜಾರಿಗೊಳಿಸಿತು.
ತೆಕ್ಕಟ್ಟೆ ಹಾಗೂ ಸಮೀಪದ ಕೋಟ ಭಾಗದ ಮಕ್ಕಳು ಸ್ವ ಇಚ್ಛೆಯಿಂದ ಭಾಗಿಯಾಗಿದ್ದು ಪಂಚವರ್ಣ ಸಂಘಟನೆ ನಿರಂತರವಾಗಿ 290ವಾರಗಳ ಕಾಲ ರಸ್ತೆ ಒಳರಸ್ತೆ, ಬೀಚ್, ದೇಗುಲ ಹೀಗೆ ಹಲವು ಭಾಗಗಳನ್ನು ಸ್ವಚ್ಛಗೊಳಿಸುತ್ತಾ ಜನಸಾಮಾನ್ಯರಲ್ಲಿ ಜಾಗೃತಿ ಆಂದೋಲವನ್ನು ಹಮ್ಮಿಕೊಂಡು ಬರುತ್ತಿದೆ ಆದರೆ ಇಂದು ಹಮ್ಮಿಕೊಂಡ ಈ ಅಭಿಯಾನ ತೆಕ್ಕಟ್ಟೆ ಸೇರಿದಂತೆ ವಿವಿದೆಡೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಯುವ ಸಮುದಾಯ ತೊಡಗಿಕೊಂಡ ರೀತಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
ತೆಕ್ಕಟ್ಟೆ ಗ್ರಾಮಪಂಚಾಯತ್ ಹಾಗೂ ಅದರ ಎಸ್ ಎಲ್ ಆರ್ ಎಂ ಘಟಕದ ನಿರ್ವಾಹಕಿ ರೇವತಿ ತೆಕ್ಕಟ್ಟೆ ಅವರ ಸಹಕಾರದೊಂದಿಗೆ ಈ ಕಾರ್ಯಕ್ರಮ ಜರಗಿದ್ದು ವಿಶೇಷವಾಗಿದೆ.
ಸ್ಟೀಲ್ ಬಾಟಲಿಗೆ ಕೊಡುಗೆ
ವಿನೂತನವಾಗಿ ಹಮ್ಮಿಕೊಂಡ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲಾ ಯುವ ಸಮುದಾಯಕ್ಕೆ ಪಂಚವರ್ಣ ಸಂಘಟನೆ ಗಣ್ಯರ ಸಮ್ಮುಖದಲ್ಲಿ ಸ್ಟೀಲ್ ನೀರಿನ ಬಾಟಲಿ ನೀಡಿ ಗೌರವಿಸಿತು.
ಮುಖ್ಯ ಅಭ್ಯಾಗತರಾಗಿ ಮೊಗವೀರ ಯುವ ಸಂಘದ ನಿಯೋಜಿತ ಉಡುಪಿ ಜಿಲ್ಲಾಧ್ಯಕ್ಷ ರವೀಶ್ ಕೊರವಡಿ, ಕೊಮೆ ಕೊರವಡಿ ವಿವಿದ್ದೋದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಹರಪ್ಪನಕೆರೆ, ಕೋಶಾಧಿಕಾರಿ ರಾಜೇಶ್ ಕಾಂಚನ್, ಪಂಚವರ್ಣ ಯುವಕಮಂಡಲದ ಸದಸ್ಯ ಮಹೇಶ್ ಬೆಳಗಾವಿ, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್ ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ತೆಕ್ಕಟ್ಟೆ ಎಸ್ ಎಲ್ ಆರ್ ಎಂ ಘಟಕದ ನಿರ್ವಾಹಕಿ ರೇವತಿ ತೆಕ್ಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ರವೀಂದ್ರ ಕೋಟ ಸ್ವಾಗತಿಸಿ, ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ತಿಳಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











