ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಗೋಳಿಯಂಗಡಿ ಶಾಖೆಯು ಗೋಳಿಯಂಗಡಿ ಎಸ್.ನಾಗರಾಜ್ ಭಟ್ ಮಾಲಕತ್ವದ ಹೊಟೇಲ್ ಶ್ರೀಗಣೇಶಪ್ರಸಾದ ಕಟ್ಟಡಕ್ಕೆ ಸ್ಥಳಾಂತರಗೊಂಡ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜ.17ರಂದು ನಡೆಯುತು.













ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿ ಮಾತನಾಡಿ ಸಹಕಾರಿ ಬ್ಯಾಂಕುಗಳು ಅಮೂಲ್ಯ ಸೇವಾ ಸೌಲಭ್ಯಗಳೊಂದಿಗೆ ಜನರ ಅವಶ್ಯತೆಗಳಿಗೆ ಸ್ಫಂಧಿಸುವುದರೊಂದಿಗೆ ವಿಶ್ವಾಸಕ್ಕೆ ಪಾತ್ರವಾಗಿವೆ, ಕೇಂದ್ರ ಸಹಕಾರಿ ಬ್ಯಾಂಕಿನ ಗೋಳಿಯಂಗಡಿ ಶಾಖೆಯು ದಾಖಲೆಗೂ ಮಿಕ್ಕಿದ ವ್ಯವಹಾರದೊಂದಿಗೆ ಉತ್ತಮ ಸಾಧನೆಯ ಮೂಲಕ ಇನ್ನಷ್ಟು ವಿಶ್ವಾಸರ್ಹತೆಯನ್ನು ಹೆಚ್ಚಿಸಿದೆ. ಸಹಕಾರಿ ಸಂಘಗಳು ಹೊಂದಿರುವ ಹಣವನ್ನು ಅವಶ್ಯಕತೆ ಇರುವ ಸದಸ್ಯರಿಗೆ ನೀಡುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬೇಕು. ಬ್ರಿಟೀಷರ ಕಾಲದಿಂದಲೂ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ವ್ಯವಹಾರದೊಂದಿಗೆ ಸ್ಫಂದಿಸಿವೆ. ನವೋದಯ ಸ್ವ ಸಹಾಯ ಸಂಘಗಳು ಮಹಿಳೆಯರಲ್ಲಿ ಆರ್ಥಿಕ ಸ್ವಾಲಂಭನೆಗೆ ಪೂರಕವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ದೇಶದ ನಾನಾ ಭಾಗಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅವಿಭಜಿತ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತಾಪಿ ವರ್ಗಕ್ಕೆ ನೀಡುವ ಉತ್ತಮ ಸೇವಾ ಸೌಲಭ್ಯಗಳ ಸದುಪಯೋಗದಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸದೆ ಸಂತೃಪ್ತಿಯನ್ನು ಕಾಣುವಂತಾಗಿದೆ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳು ಹಳ್ಳಿ ಭಾಗಗಳಿಂದ ನಗರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿವೆ. ಸಹಕಾರಿ ಬ್ಯಾಂಕ್‍ಗಳು ಹಾಗೂ ಸಹಕಾರಿ ಸಂಘಗಳು ಗ್ರಾಮೀಣ ಭಾಗಗಳಲ್ಲಿ ಶಾಖೆಗಳನ್ನು ತೆರೆಯುವುದರೊಂದಿಗೆ ಹಳ್ಳಿಯ ಜನರ ಬೇಡಿಕೆಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಇನ್ನಷ್ಟು ಪ್ರಗತಿಗೆ ಸಹಕಾರ ನೀಡುತ್ತಿವೆ.ಜನರ ಬಳಿ ತೆರಳಿ ಬ್ಯಾಂಕ್ ವ್ಯವಹಾರ ನಡೆಸುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮ ಭಾರಿಗೆ ಆರಂಭಿಸಿದ ಮೊಬೈಲ್ ಬ್ಯಾಂಕಿಂಗ್ ವ್ಯವಹಾರವು ಉತ್ತಮ ವ್ಯವಹಾರದೊಂದಿಗೆ ಜನರ ಪ್ರಶಂಸೆಯೊಂದಿಗೆ ದೇಶದಲ್ಲಿ ಮಾದರಿಯಾಗಿದೆ.ಜನರ ಅವಶ್ಯತೆಗಳಿಗಾಗಿ ಇನ್ನಷ್ಟು ವ್ಯವಹಾರವನ್ನು ಹೆಚ್ಚಿಸುವಲ್ಲಿ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸ್ಫಂದಿಸಲಾಗುವುದು. ಸಹಕಾರಿ ಬ್ಯಾಂಕ್ ಜನರ ಸೇವೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ ಎಂದರು.
ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸೂರ್ಗೋಳಿ ಮಾತನಾಡಿ,
ಬೆಳ್ವೆ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬಿ.ಸತೀಶ್ ಕಿಣಿ ಬೆಳ್ವೆ ನೂತನ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.
ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ,ಗೋಳಿಯಂಗಡಿ ಉದ್ಯಮಿ ವೈ.ಕರುಣಾಕರ ಶೆಟ್ಟಿ ಯರುಕೋಣೆ ನೂತನ ಸೇಪ್ ಲಾಕರ್ ಉದ್ಘಾಟಿಸಿದರು.
ಕಟ್ಟಡ ಮಾಲಕ ಎಸ್ ನಾಗರಾಜ್ ಭಟ್ ಗೋಳಿಯಂಗಡಿ, ಬೆಳ್ವೆ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬಿ.ಸತೀಶ್ ಕಿಣಿ ಬೆಳ್ವೆ, ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ,ಉಡುಪಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಜಯಕರ ಶೆಟ್ಟಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರುಗಳಾದ ಎಸ್ ರಾಜು ಪೂಜಾರಿ,ಐಕಳಬಾವ ದೇವಿ ಪ್ರಸಾದ ಶೆಟ್ಟಿ ಬೆಳಪು,ಎಂ ಮಹೇಶ ಹೆಗ್ಡೆ,ಬಿ.ಅಶೋಕಕುಮಾರ್ ಶೆಟ್ಟಿ,ರಾಜೇಶ ರಾವ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರವೀಂದ್ರ ಬಿ,ಕೇಂದ್ರ ಸಹಕಾರಿ ಬ್ಯಾಂಕಿನ ಗೋಳಿಯಂಗಡಿ ಶಾಖಾ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಂ, ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ನವೋದಯ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
ಕಟ್ಟಡ ಮಾಲಕ ಎಸ್ ನಾಗರಾಜ್ ಭಟ್ ಗೋಳಿಯಂಗಡಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗೋಳಿಯಂಗಡಿ ಶಾಖಾ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಂ ಇವರುಗಳನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ,ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿ ಬೆಂಗಳೂರು ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರಕುಮಾರ್ ಸನ್ಮಾನಿಸಿದರು.











