ಕಥೋಲಿಕ್ ಸಭಾ ಕುಂದಾಪುರ ವಲಯದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ

0
306

Click Here

Click Here

ಬಿಕ್ಕಟ್ಟು ಮತ್ತು ಸಮಸ್ಯೆಗಳಿಂದ ಪ್ರತಿಭೆಗಳು ಹೊರಹೊಮ್ಮುತ್ತದೆ – ವಿವಿಯನ್ ಕ್ರಾಸ್ಟೊ

ಕುಂದಾಪುರ :ಬಿಕ್ಕಟ್ಟುಗಳನ್ನು ಸಕರಾತ್ಮಕ ಸವಾಲುಗಳನ್ನಾಗಿ ಸ್ವೀಕರಿಸಿದ ಸಮಯದಲ್ಲಿ ಪ್ರತಿಭೆಗಳು ಹೊರಹೊಮ್ಮುತ್ತದೆ. ಇಂದಿನ ಕಾಲದ ಹೊಸತನದ ಸವಾಲುಗಳನ್ನು ಯುವಜನತೆ ಅಧ್ಯಯನಶೀಲತೆ ಮತ್ತು ವ್ಯಕ್ತಿತ್ವ ವಿಕಸನದಿಂದ ಗಮನವನ್ನು ನೀಡಬೇಕು ಎಂದು ಉದ್ಯಮಿ ವಿವಿಯನ್ ಕ್ರಾಸ್ಟೊ ತಿಳಿಸಿದರು.

ಸೈಂಟ್ ಮೇರಿಸ್ ಸಭಾಂಗಣದಲ್ಲಿ ಕಥೋಲಿಕ್ ಸಭಾ ವಲಯ ಸಮಿತಿ ಹಾಗೂ ಶೆವೊಟ್ ಪ್ರತಿಷ್ಟಾನ (ರಿ) ಕುಂದಾಪುರ ಇವರು ಜಂಟಿಯಾಗಿ ಆಯೋಜಿಸಿದ್ದ , ವಲಯ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಲಯ ಧರ್ಮ ಗುರುಗಳು ಅತಿ ವಂದನೀಯ ಪೌಲ್ ರೇಗೊ ಮಾತನಾಡಿ ನಿರಂತರ ಪ್ರಯತ್ನ ಸಾಧನೆಯ ಏಕಮಾತ್ರ ಸೂತ್ರವೆಂದು ಸಂದೇಶ ನೀಡಿದರು.

ಶೇವೊಟ್ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್ ರಾಯ್ ಕಿರಣ್ ಕ್ರಾಸ್ಟೋ , ವಲಯದ ಪ್ರತಿಭಾವಂತ ಮಕ್ಕಳಿಗೆ ನೇತನ್ ಕರ್ವಾಲೋ ವತಿಯಿಂದ ನೀಡುವ ವಿಕ್ರಮ್- ಸುನಿತ ವಿದ್ಯಾರ್ಥಿ ವೇತನ ಮತ್ತು ಸಮಾಜದ ದುರ್ಬಲ ಕುಟುಂಬಗಳಿಗೆ ಟ್ರಸ್ಟ್ ವತಿಯಿಂದ ಆರ್ಥಿಕ ಸಹಾಯವನ್ನು ವಿತರಿಸಿ , ಸಮಾಜ ನಮಗೆ ನೀಡಿದ ಒಂದು ಪಾಲನ್ನು ಸಮಾಜಕ್ಕೆ ಮತ್ತೆ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಲಯ ಮಟ್ಟದ ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಸಾರಾ ಡಿಸೋಜ, ಫ್ಲಿಪಾ ಡಿಸೋಜ ಬಸ್ರೂರು, ಅನ್ನ ಲೋಬೋ, ರಿಯಾ ನಜರೆತ್ ಬೈಂದೂರು , ಆರಾನ್ ಲೋಬೋ ಬಸ್ರೂರು , ಫಿಯೋನಾ ಬರೆಟೊ ಪಡುಕೋಣೆ , ವೇಲೆನ್ಸಿಯ ಡಿಸೋಜ ಕುಂದಾಪುರ , ಜನ್ಸಿಯ ಮೋಂತೆರೋ ಪಡುಕೋಣೆ , ಸಾವಿಯ ಮಾರ್ಟಿಸ್ ಕೋಟೇಶ್ವರ , ಒಲಿಟಾ ರೆಬೆಲ್ಲೊ ಗಂಗೊಳ್ಳಿ , ಶೈನಾ ಕ್ರಾಸ್ತಾ ಕೋಟೇಶ್ವರ , ಸ್ನೋವಿ ಲೋಬೋ ಬೈಂದೂರು ಫಿಯೋನಾ ನಜರೆತ್ ಬೈಂದೂರು , ಮರಿಯಾ ರೆಬೆರೋ ಬೈಂದೂರು , ರಿಯಾ ಡಿಸಿಲ್ವ ತಲ್ಲೂರು , ಆಲಿಸ್ಟರ್ ರೆಬೆರೋ ಬೈಂದೂರು , ರವರನ್ನು ಪುರಸ್ಕರಿಸಲಾಯಿತು.

ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸುಜನ್ ಡಿಸೋಜ ಪಡುಕೋಣೆ ,ಸ್ಟಾರೆಲ್ ಮಸ್ಕರೇನಸ್ ಹಂಗಳೂರು , ರೀಹಾನಾ ಲುವಿಸ್ ಪಡುಕೋಣೆ , ಅರೆನಾ ಲೋಬೋ ಬೈಂದೂರು , ವಿಯಾನೆಲ್ ಮಾಂಥೆರೋ ತಲ್ಲೂರು ನಿಶ್ಚಯ ಮಾಂಥೆರೋ ಪಡುಕೋಣೆ , ಸ್ಟ್ಯಾನಿ ಡಿಸೋಜ ಕುಂದಾಪುರ , ಕೆರೆಲ್ ಲೋಬೋ ಬೈಂದೂರು , ಕ್ಲಿಯೋನ ಕ್ರಾಸ್ತಾ ಪಡುಕೋಣೆ ರವರನ್ನು ಪುರಸ್ಕೃತ ವಾಯಿತು.

Click Here

ಶೈಕ್ಷಣಿಕ ವಿಭಾಗ
ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ
ಅಶ್ಲಿತ ಡಿಸೋಜ ಪಡುಕೋಣೆ, ಜನೀಶಾ ಡಿಸೋಜ ಹೆಂಗಳೂರು, ಕ್ರಿಸ್ಟಿನ್ ಪಿಂಟೊ ಗಂಗೊಳ್ಳಿ, ಆಶ್ಲಿನ್ ಡಿಸೋಜ ಕಂಡ್ಲೂರು, ಶನಯ್ಯ ಡಿಸೋಜ ಬಸ್ರೂರು, ಪ್ರಿನ್ಸ್ ರಾಡ್ರಿಗಸ್ ತಲ್ಲೂರು, ನಿಶಿತಾ ಅಲ್ಮೀಡಾ ತ್ರಾಸಿ, ಹರ್ಷಿತಾ ಕೋಟೇಶ್ವರ.

12th ವಾಣಿಜ್ಯ ಜ್ಯೋತಿ ಬುಥೆಲ್ಲೊ ಪಡುಕೋಣೆ, ವಿಜ್ಞಾನ ವಿಭಾಗ ಅರೆಂಗಾ ಮೆಂಡೋನ್ಸಾ ತಲ್ಲೂರು ,
ಬಿಎ ವಿಭಾಗ ಪ್ರಶ್ತಿಕ ರೆಬೆರೋ ತಲ್ಲೂರು,
ಬಿಕಾಂ ವಿಭಾಗ ಅನಿಷಾ ಡಿಸೋಜ ಬಸ್ರೂರು,
Bsc ವಿಭಾಗ ರಾಯ್ಸ್ಟನ್ ಡಿಸೋಜ ಬಸ್ರೂರು ,ಜೀನ್ ಬೈಂದೂರು.

BCA ವಿಭಾಗ ವೇಲಿಟಾ ಸಾರಾ ಮೆಂಡೋನ್ಸಾ ಗಂಗೊಳ್ಳಿ.

ಇಂಜಿನಿಯರಿಂಗ್ ವಿಭಾಗದಲ್ಲಿ
ಅಲ್ರಿಯ ಡಿಸೋಜ , ವ್ಯಾಲಿನ್ ಬ್ರಗಾಂಜ ಕುಂದಾಪುರ, ಸೆಡ್ರಿಕ್ ಫೆರ್ನಾಂಡಿಸ್ ಹೆಂಗಳೂರು, ಸಿಂಡಿ ಮರಿಯ ರೆಬೆಲ್ಲೊ ಕುಂದಾಪುರ, ರಿಮಿಷಾ ಡಿಸಿಲ್ವ ಬಸ್ರೂರು.

MSC ವಿಭಾಗದಲ್ಲಿ,
ಲಿಸೆಲ್ ಅಲ್ಮೇಡಾ ಕುಂದಾಪುರ , ಸಿಮೋನಾ ಡಿಸೋಜ ಬಸ್ರೂರು , ಫಿಯೋನಾ ಮಿನೇಜಸ್ ತಲ್ಲೂರು, ಪ್ರಿನ್ಸಿಟನ್ ಡಿ ಕುನ್ಹಾ ಕುಂದಾಪುರ.

ವೈದ್ಯಕೀಯ ವಿಭಾಗದಲ್ಲಿ,
ಎಲ್ಟನ್ ಫುರ್ಟಾಡೊ , ಕುಂದಾಪುರ, ಶೆರ್ವಿನ್ ಡಿ ಕೋಸ್ಟಾ , ಕುಂದಾಪುರ

MBA ವಿಭಾಗದಲ್ಲಿ ಫಿಯೋನ ಡಯಾಸ್ , ಗಂಗೊಳ್ಳಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಂಚಾಲಕರಾದ ವಿಲ್ಸನ್ ಅಲ್ಮೇಡಾ ಸ್ವಾಗತಿಸಿ , ಪ್ರೇಮ ಡಿ ಕುನ್ಹಾ ನಿರೂಪಿಸಿ , ಆಶಾ ಕರ್ವಾಲ್ಲೊ ಅತಿಥಿಗಳನ್ನ ಪರಿಚಯಿಸಿ , ಕಾರ್ಯದರ್ಶಿ ಮರಿಯ ಡಿಸಿಲ್ವ ವಂದಿಸಿದರು. ನಿಯೋಜಿತ ಅಧ್ಯಕ್ಷೆ ಶೈಲಾ ಅಲ್ಮೇಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here