ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಡಿ ಗ್ರಾಮಪಂಚಾಯತ್ ನ ಕೋಡಿ ತಲೆ ವ್ಯಾಪ್ತಿಯ ಜನರ ಬೇಡಿಕೆಯಂತೆ ಹಿಂದೂ ರುದ್ರಭೂಮಿಗೆ ಸ್ಥಳ ಕಾಯ್ದಿರಿಸಲಾಗಿದ್ದು ಅದರಂತೆ ಶನಿವಾರ ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಸ್ಥಳೀಯರು ನಿರ್ದೇನದ ಮೇರೆಗೆ ಹತ್ತು ಸೆಂಟ್ಸ್ ಸ್ಥಳವನ್ನು ಕಾಯ್ದಿರಿಸಿ ಸರ್ವೆ ಕಾರ್ಯ ಪೂರ್ಣಗೊಳಿಸಲು ತಹಶಿಲ್ದಾರ್ ಗ್ರಾಮ ಲೆಕ್ಕಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಹುದಿನಗಳ ಬೇಡಿಕೆಗೆ ದಂಡಾಧಿಕಾರಿಗಳು ಅಸ್ತು
ಕೋಡಿ ಗ್ರಾಮಪಂಚಾಯತ್ ನಾಲ್ಕೈದು ಕಿಮೀ ದೂರದ ಕೋಡಿ ತಲೆ ಅತ್ತ ಸಮುದ್ರ ಸೇರುವ ಹೊಳೆ ಇತ್ತ ಸಮುದ್ರದ ತಟ್ಟದಲ್ಲಿ ಸಾಕಷ್ಟು ಮನೆಗಳಿರುವ ಪ್ರದೇಶವಾಗಿದೆ. ಇಲ್ಲಿನ ಜನಸಾಮಾನ್ಯ ಬಹುಬೇಡಿಕೆಗಳಲ್ಲೊಂದಾದ ಹಿಂದೂ ರುದ್ರಭೂಮಿ ಕೂಗು ಸಾಕಷ್ಟು ವರ್ಷಗಳಿಂದ ಕೇಳಿಬಂದಿರುವ ವಿಚಾರವಾಗಿದೆ.ಈ ನಿಟ್ಟಿನಲ್ಲಿ ಸ್ಥಳೀಯ ಗ್ರಾಮಪಂಚಾಯತ್ ಮುತುವರ್ಜಿಯಲ್ಲಿ ಸ್ಥಳ ಕಾಯ್ದಿರಿಸಿ ರಸ್ತೆ ಅಭಿವೃದ್ಧಿಗೊಳಿಸಲಾಗಿದ್ದು ಸರ್ವೆಕಾರ್ಯ ಪೂರ್ಣಗೊಳಿಸುವ ಕನಸಿಗೆ ತಾಲೂಕು ದಂಡಾಧಿಕಾರಿ ಮುಂದಾಗಿದ್ದಾರೆ ಇದು ಇಲ್ಲಿನ ಸ್ಥಳೀಯರಲ್ಲಿ ಸಂತೋಷ ಸೃಷ್ಠಿಸಿದೆ.
ಈ ವೇಳೆ ಕೋಟ ಹೋಬಳಿ ಕಂದಾಯ ನಿರೀಕ್ಷಕ ರಾಜು,ಐರೋಡಿ ಗ್ರಾಮ ಲೆಕ್ಕಿಗ ಚಲುವರಾಜು,ಕೋಡಿ ಗ್ರಾಮಸಹಾಯಕಿ ಸರೋಜ,ಸ್ಥಳೀಯರಾದ ವಿಶ್ವನಾಥ ಕಾರ್ವಿ ಮತ್ತಿತರರು ಉಪಸ್ಥಿತರಿದ್ದರು.











