ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂದಾಪುರದಲ್ಲಿಯೂ ಕೂಡಾ ಹಿಜಾಬ್ ವಿವಾದ ಮತ್ತೆ ಇಂದೂ ಕೂಡಾ ಮುಂದುವರಿದಿದೆ. ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಇಂದೂ ಕೂಡಾ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಣೆ ಮಾಡಿದ ಘಟನೆ ನೆಡೆದಿದೆ. ಕಾಲೇಜು ಮುಖ್ಯಸ್ಥರು ಸರ್ಕಾರದ ಆದೇಶದಂತೆ ಕಾಲೇಜು ವಸ್ತ್ರಸಂಹೀತೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ನಿನ್ನೆಯೇ ಸ್ಪಷ್ಟವಾಗಿ ಸೂಚನೆ ನೀಡಿದ್ದರಿಂದ ಇವತ್ತು ಕಾಲೇಜು ಆವರಣ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು.






ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರು ಮತ್ತು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ನಡುವೆ ಮಾತಿನ ಚಕಮಕಿ ನಡೆಯಿತು.
ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ನಿಂತು ನಾವು ಭಾರತದ ಪ್ರಜೆಗಳು, ಭಯೋತ್ಪಾಕರಲ್ಲ, ನಮಗೂ ಕಲಿಕೆಗೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿರುವುದು ಕಂಡು ಬಂತು.
ಒಟ್ಟಾರೆಯಾಗಿ ಹಿಜಾಬ್ ವಿವಾದ ಮುಗಿದಂತೆ ಕಾಣುತ್ತಿಲ್ಲ. ಸಮುದಾಯದ ಪ್ರಮುಖರು ಮದ್ಯಪ್ರವೇಶಿಸಿ ಸರಿಪಡಿಸಿಕೊಳ್ಳುವ ಅವಶ್ಯಕತೆ ಇದೆ.











