ಜೋಸೆಫ್ ಡಿ’ಸೋಜಾರಿಗೆ ಸೇವಾ ನಿವೃತ್ತಿ ಬೀಳ್ಕೊಡುಗೆ

0
198

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕಳೆದ 40 ವರ್ಷಗಳಿಂದ ಗ್ರಹ ರಕ್ಷಕ ದಳದಲ್ಲಿ ಸೇವೆ ಸಲ್ಲಿಸಿ ಇದೀಗ ವಯೋ ನಿವೃತ್ತಿ ಹೊಂದಿರುವ ಜೋಸೆಫ್ ಡಿಸೋಜಾ ಅವರನ್ನು ಪತ್ನಿ ಆಶಾ ಡಿಸೋಜ ಸಹಿತ ಕಂಡ್ಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸಮ್ಮಾನಿಸಿ ಬೀಳ್ಕೊಡಲಾಯಿತು. ಕುಂದಾಪುರ, ಗಂಗೊಳ್ಳಿ, ಕೋಟ, ಬೈಂದೂರು, ಶಂಕರನಾರಾಯಣ, ಕಂಡ್ಲೂರು ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ತುರ್ತು ಸಂದರ್ಭಗಳಲ್ಲಿ ರಾಜ್ಯದ ವಿವಿದೆಡೆಗಳಲ್ಲೂ ಕರ್ತವ್ಯ ನಿಭಾಯಿಸಿದ್ದಾರೆ.

Click Here

ಈ ಸಂದರ್ಭದಲ್ಲಿ ಠಾಣಾ ಉಪ ನೀರಿಕ್ಷಕ ನಿರಂಜನ್ ಗೌಡ ಹಾಗೂ ಸಿಬಂದಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು. ತಮ್ಮ ಸೇವಾ ನಿವೃತ್ತಿ ಬೀಳ್ಕೊಡುಗೆಯ ನೆನಪಿಗಾಗಿ ಜೋಸೆಫ್, ಆಶಾ ಡಿಸೋಜ ದಂಪತಿಗಳು ಪೊಲೀಸ್ ಠಾಣೆಯ ಆವರಣದಲ್ಲಿ ಮಾವಿನ ಸಸಿಯನ್ನು ನೆಟ್ಟು ಕ್ರತಜ್ಞತೆಗಳನ್ನು ಸಲ್ಲಿಸಿದರು.

Click Here

LEAVE A REPLY

Please enter your comment!
Please enter your name here