ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆ ಇಲ್ಲಿ ಸ್ಪೋಕನ್ ಇಂಗ್ಲೀಷ್ ‘ ತರಗತಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ತರಗತಿಯನ್ನು ಶಾಲೆಯ ನಿವೃತ್ತ ಅಧ್ಯಾಪಕ ಬಾಲಕೃಷ್ಣ ಶೆಟ್ಟಿ ವಡ್ಡರ್ಸೆ ಉದ್ಘಾಟಿಸಿದರು. ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿಶಾಲ, ಸಾಯ್ಬ್ರಿಕಟ್ಟೆ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಚಂದ್ರಶೇಖರ, ಪ್ರೌಡಶಾಲಾ ಮುಖ್ಯೋಪಾಧ್ಯಾಯ ಆನಂದ ಶೆಟ್ಟಿ, ,ನಿವೃತ್ತ ಉಪನ್ಯಾಸಕ ಚಂದ್ರಶೇಖರ ಶೆಟ್ಟಿ ಯಾಳಕ್ಲು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ ಸ್ವಾಗತಿಸಿ, ಶಿಕ್ಷಕಿ ಯಶೋಧಾ ನಿರೂಪಿಸಿ ಶಿಕ್ಷಕ ಅಶೋಕ ವಂದಿಸಿದರು.ಶಿಕ್ಷಕರಾದ ಹೇಮಲತಾ,ಸಿಂಧೂಜಾ,ಪ್ರೇಮಾ ಸಹಕರಿಸಿದರು.











