ಮಣೂರು ದೇವಳದಲ್ಲಿ ನಿಧಿ ಕುಂಭ ಸ್ಥಾಪನೆ ಹಾಗೂ ಷಡಾಧಾರ ಪ್ರತಿಷ್ಠೆ ಸಂಪನ್ನ

0
424

Click Here

Click Here

 

ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಮಣೂರು ಶ್ರೀ ಮಳಲುತಾಯಿ ಅಮ್ಮನವರ ದೇವಸ್ಥಾನ ಇದರ ಜೀರ್ಣೋದ್ಧಾರ ಕಾರ್ಯದ ನಿಮಿತ್ತ ಫೆ.9 ಹಾಗೂ 10ರಂದು ನಿಧಿ ಕುಂಭ ಸ್ಥಾಪನೆ ಹಾಗೂ ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮ ಜರಗಿತು.

Click Here

ತಂತ್ರಿಗಳಾದ ನಿಲಾವರ ಕೃಷ್ಣ ಅಡಿಗ ಹಾಗೂ ಚಂದ್ರಶೇಖರ ಅಡಿಗ ಮಣೂರು ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ನಿಧಿ ಕುಂಭ ,ಶಿಲಾಪದ್ಮ,ಶಿಲಾಕೂರ್ಮ, ಯೋಗನಾಳ, ನಪುಂಸಕ ಶಿಲಾ ಕಾರ್ಯಕ್ರಮಗಳು ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಎರಡು ದಿನಗಳ ಕಾಲ ನಡೆಯಿತು.

ದೇವಳದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಪ್ರಕಾಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಕಂಬಳಗದ್ದೆಮನೆ,ಉಪಾಧ್ಯಕ್ಷರಾದ ಶೇಖರ ಮರಕಾಲ ಅರಿಕೆರೆಮನೆ, ನರಸಿಂಹ ಪೂಜಾರಿ ಶಿರಿಯಾರಮನೆ, ಪ್ರಕಾಶ್ ಶೆಟ್ಟಿ ಪಟೇಲರಮನೆ, ಪ್ರಸಾದ್ ಬಾಳೆಬೆಟ್ಟು, ಜಯರಾಮ ಶೆಟ್ಟಿ ದೊಡ್ಮನೆ,ಎಮ್ ಎಸ್ ಸಂಜೀವ,ಸುರೇಶ್ ಪೂಜಾರಿ,ದೇವಳದ ಕಾರ್ಯದರ್ಶಿ ಪ್ರಶಾಂತ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here