ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟತಟ್ಟು ಪಡುಕರೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಶಿಕ್ಷಕ ಸುಧಾಕರ ಬಿ ರವರ ಬೀಳ್ಕೊಡುಗೆ ಸಮಾರಂಭ ಇತ್ತೀಚಿಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಸಹ ಶಿಕ್ಷಕ ವೃಂದ, ಎಸ್‍ಡಿಎಂಸಿ, ಹಾಗೂ ಬ್ರಹ್ಮಾವರ ವಲಯ ಶಿಕ್ಷಕ ಸಂಘದ ಸಮ್ಮುಖದಲ್ಲಿ ನಿವೃತ್ತ ಶಿಕ್ಷಕ ಸುಧಾಕರ ಬಿ ದಂಪತಿಗಳನ್ನು ಸನ್ಮಾನಿಸಿದರು.
ಸಭೆಯಲ್ಲಿ ಬ್ರಹ್ಮಾವರ ವಲಯ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹೊಳ್ಳ ,ಕಾರ್ಕಡ ವಿಭಾಗದ ಸಮೂಹ ಸಂಪನ್ಮೂಲ ವ್ಯಕ್ತಿ ಸವಿತಾ, ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷ ಸುಲೈಮಾನ್,ನಿವೃತ್ತ ಶಿಕ್ಷಕ ರಾಜಾರಾಮ ಐತಾಳ್,ಶಾಲಾ ಪ್ರೋತ್ಸಾಹಕರಾದ ನಾರಾಯಣ ಐತಾಳ್,ಎಸ್‍ಡಿಎಮ್‍ಸಿ ಮಾಜಿ ಅಧ್ಯಕ್ಷರಾದ ದಿವಾಕರ ಐತಾಳ್,ಹುಸೇನ್,ಎಸ್‍ಡಿಎಮ್‍ಸಿ ಉಪಾಧ್ಯಕ್ಷೆ ಶ್ಯಾಮಲ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಲಯಾಧ್ಯಕ್ಷ ಪ್ರಶಾಂತ್,ಶಿಕ್ಷಕ ಲಕ್ಷ್ಮಣ ಸುವರ್ಣ, ಶೈಲಜಾ, ಪ್ರಳೀತ ,ಮತ್ತು ಸಹ ಶಿಕ್ಷಕರು ,ಎಸ್‍ಡಿಎಮ್‍ಸಿ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು ಶಾಲಾ ಮುಖ್ಯ ಶಿಕ್ಷಕಿ ಜಾನಕಿ ಸ್ವಾಗತಿಸಿ, ಶಿಕ್ಷಕ ಗಣೇಶ್ ನಿರೂಪಿಸಿ, ಸಂಗೀತ ಎಸ್ ಕೆ ವಂದಿಸಿದರು.











