ಕುಂದಾಪುರ ಮಿರರ್ ಸುದ್ದಿ…
ಕೋಟ : ಪ್ರಸ್ತುತ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಿಸುವ ಜವಾಬ್ದಾರಿ ಯುವಕ ಮೇಲಿದೆ ಆ ಕಾರ್ಯ ಇಂದಿನಿಂದಲೇ ಆರಂಭಗೊಳ್ಳಬೇಕು ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದ್ದಾರೆ.
ಅವರು ಬ್ರಹ್ಮಾವರದ ಸಮೀಪ ಮಟಪಾಡಿ ವಿಜಯ ಬಾಲನಿಕೇತನ ಆಶ್ರಮದಲ್ಲಿ ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಹಮ್ಮಿಕೊಂಡ ಆಶ್ರಮಕ್ಕೆ ದಿನಸಿ ಕೊಡುಗೆ, ಪರಿಸರ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಎದುರಾಗುತ್ತಿರು ದುಷ್ಪರಿಣಾಮ ಹಾಗೂ ಪ್ರಕೃತಿಯ ಮೇಲೆ ದಿನದಿಂದ ದಿನಕ್ಕೆ ಎದಯರಾಗುತ್ತಿರುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿ, ಕಂಡ ಕಂಡಲ್ಲಿ ಎಸೆಯುತ್ತಿರುವ ತ್ಯಾಜ್ಯಕ್ಕೆ ಸ್ಥಳೀಯಾಡಳಿತ ಕಡಿವಾಣ ಹಾಕಬೇಕು,ಆ ಮೂಲಕ ಪ್ರತಿಯೊರ್ವರಿಗೂ ಅರಿವು ಮೂಡಿಸುವ ಕೆಲಸ ಮಾಡಬೇಕು ಅಲ್ಲದೆ ಈ ಕುರಿತು ಯುವ ಸಮೂಹ ದಿಟ್ಟ ನಿರ್ಧಾರ ಕೈಗೊಳ್ಳವ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಉಳಿಸಿಬೆಳೆಸಲು ಹಲವು ರೀತಿಯ ಕ್ರಮಗಳ ಬಗ್ಗೆ ಉಲ್ಲೇಖಿಸಿದರು.
ಈ ಬಾಲಾಶ್ರಮ ಸಾಕಷ್ಟು ಯುವ ಮನಸ್ಸುಗಳಿಗೆ ಮುನ್ನುಡಿ ಬರೆಯುತ್ತಿದೆ.ಒಂದು ಸಂಸ್ಥೆ ಕಟ್ಟುವುದು ಸುಲಭ ಆದರೆ ಅದನ್ನು ನಿರಂತವಾಗಿ ಕೊಂಡ್ಯೊಯುವ ಮನೋಭಾವನೆ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ ಆ ಮೂಲಕ ವಿಜಯನಿಕೇತನ ಸೇವಾ ಕೈಂಕರ್ಯಕ್ಕೆ ಹೊಸ ಆಯಾಮ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯನಿಕೇತನ ಬಾಲಾಶ್ರಮದ ಮೇಲ್ವಿಚಾರಕ ಜಯರಾಮ ನಾಯಿರಿ ವಹಿಸಿ ಸ್ವಾಗತಿಸಿದರು.
ಮುಖ್ಯ ಅತಿಥಿಗಳಾಗಿ ನಿಸ್ವಾರ್ಥ ಸೇವಾ ಟ್ರಸ್ಟ್ ಕೋಟ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಗೋಪಿನಾಥ ಕಿಣಿ,ಸಂಚಾಲಕ ಪ್ರದೀಪ್ ಪೂಜಾರಿ,ಸದಸ್ಯ ಸೂರ್ಯಕಾಂತ್ ಶೆಟ್ಟಿ ,ಪಂಚವರ್ಣ ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಗಿರೀಶ ಆಚಾರ್ಯ ,ಬಾಲಾಶ್ರಮದ ಮಾತಾಜೀ ಉಪಸ್ಥಿತರಿದ್ದರು.
ಇದೇ ವೇಳೆ ಒಂದು ತಿಂಗಳಿಗಾಗುವ ದಿನಸಿ ವಸ್ತುಗಳನ್ನು ಟ್ರಸ್ಟ್‍ನ ಹಿತೈಷಿ ಹಾಗೂ ದಾನಿಗಳ ನೆರವಿನೊಂದಿಗೆ ಬಾಲಾಶ್ರಮಕ್ಕೆ ನೀಡಲಾಯಿತು.












