ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಂದಿನ ದಿನದಲ್ಲಿ ದಿನಬಳಕೆ ತೈಲಗಳಲ್ಲಿ ಕಲಬೆರಕೆ ವಸ್ತುಗಳ ಸೇರ್ಪಡೆಯಿಂದ ಗ್ರಾಹಕರ ಆರೋಗ್ಯ ಹದಗೆಡುತ್ತಿದೆ.
ಗ್ರಾಮೀಣ ಭಾಗದಲ್ಲಿ ಶುದ್ಧ ತೆಂಗಿನ ಎಣ್ಣೆ ಘಟಕವನ್ನು ತೆರೆಯುವ ಮೂಲಕ ನೈಸರ್ಗಿಕ ಎಣ್ಣೆ ಸಿಗುವುದರೊಂದಿಗೆ ಸ್ಥಳೀಯ ತೆಂಗು ಕೃಷಿಕರಿಗೂ ಹತ್ತಿರದಲ್ಲೇ ಮಾರಾಟ ಕೇಂದ್ರವನ್ನು ತೆರೆದಿರುವುದು ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕೋಟ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ ಸಿ ಕುಂದರ್ ಹೇಳಿದರು.
ಅವರು ಬೀಜಾಡಿ ಫಿಶರೀಸ್ ರಸ್ತೆಯಲ್ಲಿ ನೂತನವಾಗಿ ಆರಂಭಿಸಲ್ಪಟ್ಟ ಶ್ರೀ ಲಕ್ಷ್ಮೀಕೃಷ್ಣ ಇಂಡಸ್ಟ್ರೀಸ್ ಉದ್ಘಾಟಿಸಿ ಮಾತನಾಡಿದರು.
ಶ್ರೀ ಲಕ್ಷ್ಮೀಕೃಷ್ಣ ಇಂಡಸ್ಟ್ರೀಸ್ ಮಾಲೀಕರಾದ ಪ್ರತಿಮಾ ಚಂದ್ರಶೇಖರ ಬೀಜಾಡಿ ಮಾತನಾಡಿ, ನಮ್ಮಲ್ಲಿ ಶುದ್ಧ ತೆಂಗಿನ ಎಣ್ಣೆ ಉತ್ಪಾದನಾ ಘಟಕ ಮತ್ತು ಹಿಟ್ಟಿನ ಗಿರಣಿ, ತೆಂಗಿನಕಾಯಿ ಹಾಗೂ ಕೊಬ್ಬರಿಯನ್ನು ಖರೀದಿಸಲಾಗುವುದು ಎಂದರು.
ಕೆನರಾ ಬ್ಯಾಂಕ್ ಕುಂದಾಪುರ ಆರ್ ಎಚ್ ವಿಭಾಗೀಯ ಪ್ರಬಂಧಕ ರತ್ನಾಕರ್, ಬೀಜಾಡಿ ಕೆನರಾ ಬ್ಯಾಂಕ್ ಪ್ರಬಂಧಕ ರವಿತೇಜ, ಬೀಜಾಡಿ ನಾಗಪಾತ್ರಿ ವೇದಮೂರ್ತಿ ಶ್ರೀ ಶಂಕರನಾರಾಯಣ ಬಾಯಿರಿ, ಶಿಕ್ಷಣ ತಜ್ಞ ಶೇಷಗಿರಿ ಗೊಟ, ಚಿತ್ರದುರ್ಗ ಉಪಾಧ್ಯ ಗ್ರೂಪ್ ಆಫ್ ಹೊಟೇಲ್ ಆಡಳಿತ ನಿರ್ದೇಶಕ ದೀಪಾನಂದ ಉಪಾಧ್ಯ, ನಿವೃತ್ತ ಮುಖ್ಯ ಶಿಕ್ಷಕ ಲೂವಿಸ್ ಜೆ.ಫೆರ್ನಾಂಡಿಸ್, ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್, ತಾಂತ್ರಿಕ ತಜ್ಞ ಕೃಷ್ಣಯ್ಯ ಆಚಾರ್ಯ, ಶ್ರೀ ಗೋಕುಲ್ ಆಯಿಲ್ ಮಿಲ್ ಮಾಲೀಕ ಗೋಪಾಲ ಗಾಣಿಗ, ಬೀಜಾಡಿ ಸಪರಿವಾರ ಶ್ರೀ ನವದುರ್ಗಾಪರಮೇಶ್ವರಿ ದೇವಸ್ಥಾನದ ಗೌರವಧ್ಯಕ್ಷ ಶ್ರೀನಿವಾಸ್ ಗಾಣಿಗ, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಘಟಕವನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡಿದ ಬೀಜಾಡಿ ಕೆನರಾ ಬ್ಯಾಂಕ್ ಪ್ರಬಂಧಕ ರವಿತೇಜ ಮತ್ತು ಘಟಕದಲ್ಲಿ ಯಂತ್ರೋಪಕರಣಗಳನ್ನು ನಿರ್ಮಾಣ ಮಾಡಿದ ತಾಂತ್ರಿಕ ತಜ್ಞ ಕೃಷ್ಣಯ್ಯ ಆಚಾರ್ಯ ಗೋಪಾಡಿ ಇವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ರಾಘವೇಂದ್ರ ಆಚಾರ್ಯ ಕುಂಭಾಸಿ ಕಾರ್ಯಕ್ರಮ ನಿರೂಪಿಸಿದರು.











