ಕೊಲಂಬೊದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ದಿನೇಶ್ ಗಾಣಿಗರಿಗೆ ಹುಟ್ಟೂರ ಸ್ವಾಗತ

0
458

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಇತ್ತೀಚಿಗೆ ಶ್ರೀಲಂಕಾದ ಕೊಲಂಬೊ ಸುಗತದಾಸ್‍ನಲ್ಲಿ ನಡೆದ ವಿಶ್ವ ಮಾಸ್ಟರ್ ಅಥ್ಲೆಟಿಕ್ ಸ್ಪರ್ಧಾ ಕೂಟದ ತ್ರಿಪ್ಪಲ್ ಜಂಪ್ ವಿಭಾಗದಲ್ಲಿ ಕಂಚಿನ ಪದಕ ವಿಜೇತ ಕೋಟ ದಿನೇಶ್ ಗಾಣಿಗ ಗುರುವಾರ ಹುಟ್ಟೂರಿಗೆ ಆಗಮಿಸಿದರು.

ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದ ಸಮೀಪ ಭವ್ಯ ಸ್ವಾಗತದ ಮೂಲಕ ಗ್ರಾಮಸ್ಥರು,ಕ್ರೀಡಾಭಿಮಾನಿಗಳು ಬರಮಾಡಿಕೊಂಡರು.

Click Here

ಕೋಟ ಗ್ರಾಮಪಂಚಾಯತ್ ಸದಸ್ಯ ಚಂದ್ರಯ್ಯ ಆಚಾರ್ಯ ಪುಷ್ಭ ನೀಡಿ ಸ್ವಾಗತಿಸಿದರು. ನಂತರ ಶ್ರೀ ಅಮೃತೇಶ್ವರಿ ದೇವಳದಲ್ಲಿ ವಿಶೇವ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಾಲಿಗ್ರಾಮ ಪಟ್ಟಣಪಂಚಾಯತ್ ಮಾಜಿ ಸದಸ್ಯ ಭೋಜ ಪೂಜಾರಿ,ಪಂಚವರ್ಣ ಯುವಕ ಮಂಡಲ ಕೋಟ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಅಧ್ಯಕ್ಷ ಅಮೃತ್ ಜೋಗಿ,ನಾಗರಾಜ್ ಗಾಣಿ,ಗಿರೀಶ್ ಆಚಾರ್ಯ,ಜೈ ಕಂದಾಪುರ ಸೇವಾ ಟ್ರಸ್ಟ್ ಜಯರಾಜ್ ಸಾಲಿಯಾನ್,ಮಣೂರು ಫ್ರೆಂಡ್ಸ್‍ನ ಅಧ್ಯಕ್ಷ ದಿನೇಶ್ ಆಚಾರ್ಯ, ಕೋಟತಟ್ಟು ಗ್ರಾಮಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ,ಸದಸ್ಯರಾದ ಸತೀಶ್ ಕುಂದರ್,ಸಾಲಿಗ್ರಾಮದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗಾಣಿಗ,ಸ್ಥಳೀಯಾದ ವಿಶ್ವನಾಥ ಆಚಾರ್ಯ,ಸಂತೋಷ್ ಸಾಲಿಯಾನ್ ಪಡುಕರೆ, ಗಣೇಶ್ ಭಂಡಾರಿ,ರಾಜೇಶ್ ಕಂಬಳಗದ್ದೆ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here