ಕುಂದಾಪುರ ಮಿರರ್ ಸುದ್ದಿ…
ಕೋಟ: ಉಡುಪಿ ಎಪಿಎಂಸಿ ಇದರ ಕೋಟ ವ್ಯಾಪ್ತಿಯ ಸಂತೆಮಾರುಕಟ್ಟೆ ಇಲ್ಲಿ ಸುಮಾರು 55ಲಕ್ಷ ರೂ ವೆಚ್ಚದಲ್ಲಿ ಕೃಷಿ ಉತ್ಪನ್ನ ಶೇಖರಣಾ ಗೋದಾಮು,ಕಂಪೌಂಡ್ ಶಂಕು ಸ್ಥಾಪನೆ ಭಾನುವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರೆವರಿದರು
ಈ ಸಂದರ್ಭದಲ್ಲಿ ಮಾತನಾಡಿ ಮುಂದಿನ ತಲೆಮಾರಿಗೆ ಅನುಕೂಲಕ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಕಾರ್ಯೊನ್ಮುಖವಾಗಬೇಕು ಆ ಮೂಲಕ ಕೃಷಿ ಮಾರುಕಟ್ಟೆ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದಂತ್ತಾಗುತ್ತದೆ ಎಂದರಲ್ಲದೆ ,ಕೃಷಿ ಕ್ಷೇತ್ರದಲ್ಲಿ ಆಧುನಿಕತೆ ಸ್ಪರ್ಶ ನೀಡಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದರು.

ವಾರಾಹಿ ಯೋಜನೆಯ ಮೂಲಕ ಈ ಗ್ರಾಮೀಣ ಭಾಗದ ಸಾಕಷ್ಟು ಕೆರೆ ತುಂಬಿಸುವ ಯೋಜನೆಯನ್ನು ಅತಿ ಶೀಘ್ರದಲ್ಲಿ ಸ್ಥಳೀಯ ಶಾಸಕ ಹಾಲಾಡಿಯವರ ಸಮ್ಮುಖದಲ್ಲಿಅನಯಷ್ಠಾನಕ್ಕೆ ಬರಲಿದೆ.ಇದರಿಂದ ಕೃಷಿಗೆ ಪೂರಕವಾಗುವುದಲ್ಲದೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ.ಕೃಷಿ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಅನುದಾನಗಳನ್ನು ತಂದು ಆ ಮೂಲಕ ಎ.ಪಿಎಮ್ ಸಿ ಅಭಿವೃದ್ಧಿಗೊಳಿಸಲು ಸಾಧ್ಯ ಎಂದು ಮನಗಾಣಿಸಿದರು.
ಇದೇ ವೇಳೆ ಸಚಿವರನ್ನು ಗೌರವಿಸಲಾಯಿತು. ಇತ್ತೀಚಿಗೆ ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಸ್ಪರ್ಧಾ ಕೂಟದಲ್ಲಿ ಕಂಚಿನ ಪದಕ ವಿಜೇತ ದಿನೇಶ್ ಗಾಣಿಗ ಕೋಟ ಇವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆಯನ್ನು ಎ.ಪಿ.ಎಂ.ಸಿ ಉಡುಪಿ ಉಪಾಧ್ಯಕ್ಷ ಸತೀಶ್ ಶೆಟ್ಟಿ ವಹಿಸಿದ್ದರು.
ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿದಿನೇಶ್,ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ,ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಭಾಕರ್ ಮೆಂಡನ್,ಎ.ಪಿ.ಎಂ.ಸಿ ನಿರ್ದೇಶಕರಾದ ನಿರಂಜನ್ ಹೆಗ್ಡೆ,ಕಿರಣ್ ಕುಮಾರ್, ರಾಘವೇಂದ್ರ ನಾಯ್ಕ್ ಲತಾ ಎಸ್ ಶೆಟ್ಟಿ, ವನಮಾಲ,ಗುರುಪ್ರಸಾದ,ಗೋಪಾಲ ಪೈ,ಉಡುಪಿ ಎ.ಪಿ.ಎಂ.ಸಿ ಕಾರ್ಯದರ್ಶಿ ಗಾಯಿತ್ರಿ ಎಂ,ಮತ್ತಿತರರು ಉಪಸ್ಥಿತರಿದ್ದರು. ಎ.ಪಿ.ಎಂ.ಸಿ ಉಡುಪಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಪಿ ವರದಿ ವಾಚಿಸಿದರು.ಧಾರ್ಮಿಕ ವಿಧಿವಿಧಾನವನ್ನು ವೇ.ಮೂ.ಮಧುಸೂಧನ ಬಾಯರಿ ನೆರವೆರಿಸಿದರು,ಸಾಮಾಜಿಕ ಕಾರ್ಯಕರ್ತ ಕೋಟ ದಿನೇಶ್ ಗಾಣಿಗ ಸ್ವಾಗತಿಸಿ ನಿರೂಪಿಸಿ ವಂದಿಸಿದರು.











