ಕುಂದಾಪುರ ಮಿರರ್ ಸುದ್ದಿ…
ಕೋಟ: ಯಕ್ಷಗಾನದ ಅಭಿರುಚಿ ಯಕ್ಷಾಸಕ್ತರನ್ನು ಬೆಳೆಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.
ಕೋಟತಟ್ಟು ಪಡುಕರೆ ಟೀಮ್ ಭವಾಬ್ಧಿ ಹಮ್ಮಿಕೊಂಡ ಶ್ರೀಕ್ಷೇತ್ರ ಪಾವಂಜೆ ಯಕ್ಷಗಾನ ಮಂಡಳಿಯ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಯಕ್ಷಾರಾಧನೆಯ ಜೊತೆ ಸಮಾಜದ ಮುಖ್ಯವಾಹಿನಿಯಲ್ಲಿವ ಸಾಧಕರನ್ನು ಗೌರವಿಸುವ ಮನೋಭಿಲಾಷೆ ಶ್ರೇಷ್ಠತೆಯನ್ನು ಬೆಳೆಸುವ ಜೊತೆ ಇನ್ನಷ್ಟು ಸಾಧನೆಗೆ ಪುಷ್ಠಿ ನೀಡುವ ಕಾರ್ಯವಾಗಿದೆ,ಪ್ರಸ್ತುತ ಕಾಲಘಟ್ಟದಲ್ಲಿ ಸನ್ಮಾನ ಪಡೆಯುವದಕ್ಕಿಂದ ಯಾರಿಂದ ಸನ್ಮಾನ ಸ್ವೀಕರಿಸುತ್ತೇವೆ ಅದು ಪ್ರಮುಖವಾದದ್ದು ಈ ನಿಟ್ಟಿನಲ್ಲಿ ಆನಂದ್ ಸಿ ಕುಂದರ್‍ರಂತಹ ಸರಳತೆಯ ವ್ಯಕ್ತಿತ್ವದ ಮಹಾದಾನಿಗಳ ಸಮ್ಮುಖದಲ್ಲಿ ಸನ್ಮಾನ ಪಡೆದರಿವುದು ಸರ್ವಶ್ರೇಷ್ಠತೆಯನ್ನು ಕಂಡಿದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆನಂದ್ ಸಿ ಕುಂದರ್ ಮಾತನಾಡಿ ಕರಾವಳಿಯ ಗಾನಕೋಗಿಲೆ ಕಾಳಿಂಗ ನಾವಡರ ನಂತರದ ದಿನಗಳಲ್ಲಿ ಪಟ್ಲ ಎಂಬ ಯಕ್ಷದೈತ್ಯ ಶಕ್ತಿ ತನ್ನ ಗಾನಸುಧೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದೆ.ಹಾಗೂ ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಕಂಚಿನ ಪದಕ ವಿಜೇತ ದಿನೇಶ್ ಗಾಣಿಗರ ಸಾಧನೆ ಕೂಡಾ ಯುವ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದರಲ್ಲದೆ ಟೀಮ್ ಭವಾಬ್ಧಿ ಮೂಲಕ ಕಲಾಕ್ಷೇತ್ರಕ್ಕೆ ಸೀಮಿತಗೊಳ್ಳದೆ ಸಮಾಜಮುಖಿ,ಅಶಕ್ತರಿಗೆ ನೆರವು ನೀಡುವ ಕಾರ್ಯಕ್ಕೂ ಸೈ ಎನ್ನಿಸಿಕೊಳ್ಳಲಿ ಎಂದು ಶುಭಾಶಂಸನೆಗೈದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೀಮ್ ಭವಾಬ್ಧಿ ಅಧ್ಯಕ್ಷ ಪ್ರಸಾದ್ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಪಾವಂಜೆ ಯಕ್ಷಗಾನ ಮಂಡಳಿಯ ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ದಿನೇಶ್ ಗಾಣಿಗ ಇವರುಗಳನ್ನು ಸನ್ಮಾನಿಸಲಾಯಿತು.
ಟೀಮ್ ಭವಾಬ್ಧಿ ತಂಡದ ರವೀಂದ್ರ ತಿಂಗಳಾಯ,ಕೇಶವ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.











