ಹಿಜಾಬ್ ವಿವಾದ ತೀರ್ಪು ವಿರೋಧ: ಕುಂದಾಪುರದಲ್ಲೂ ಮುಸ್ಲೀಂ ಸಮುದಾಯದವರ ಅಂಗಡಿಗಳು ಬಂದ್

0
765

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ ಕರೆ ನೀಡಿದ್ದು ಮಾ.೧೭ರಂದು ಕುಂದಾಪುರ, ಬೈಂದೂರು ತಾಲೂಕಿನಲ್ಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಮುಸ್ಲಿಂ ಸಮುದಾಯದ ಎಲ್ಲಾ ಅಂಗಡಿಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಮಟನ್, ಚಿಕನ್ ಸ್ಟಾಲ್, ಹಣ್ಣಿನಂಗಡಿ, ಚಪ್ಪಲಿಯಂಗಡಿ, ಕಂಗನ್ ಸ್ಟೋರ್‌ಗಳನ್ನು ಬಂದ್ ಮಾಡಲಾಗಿದೆ. ಅತೀ ಹೆಚ್ಚು ಮುಸ್ಲೀಂ ವರ್ತಕರಿರುವ ಗಂಗೊಳ್ಳಿಯಲ್ಲೂ ಎಲ್ಲಾ ಅಂಗಡಿಗಳು ಬಂದ್ ಮಾಡಲಾಗಿದೆ. ಮುಖ್ಯವಾಗಿ ಕುಂದಾಪುರ ನಗರದಲ್ಲಿ ಮುಸ್ಲೀಂ ಸಮುದಾಯದ ಮಾಲೀಕತ್ವದ ಅಂಗಡಿ ಬಂದ್ ಮಾಡಲಾಗಿದೆ. ಗುರುವಾರ ಬೆಳಿಗ್ಗೆನಿಂದಲೇ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿದ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
Click Here

LEAVE A REPLY

Please enter your comment!
Please enter your name here