ಶ್ರೀ ಮೂಕಾಂಬಿಕಾ ಮಹಿಳಾ ಮಂಡಳ ತಾಲೂಕು ಒಕ್ಕೂಟ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

0
411

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪ್ರತೀ ಮಹಿಳೆಯೂ ಸಬಲೀಕರಣದತ್ತ ಯೋಚಿಸಿ ವೈಯಕ್ತಿಕವಾಗಿ ಬದಲಾವಣೆ ಮಾಡಿಕೊಳ್ಳಬೇಕು. ಮಾನಸಿಕ ಸಬಲೀಕರಣ, ಆರ್ಥಿಕ ಸ್ವಾವಲಂಬನೆ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಹೇಳಿದರು.

ಅವರು ಗುರುವಾರ ಇಲ್ಲಿನ ರೋಟರಿ ಕುಂದಾಪುರ ಮಿಡ್‍ಟೌನ್ ಹಾಲ್‍ನಲ್ಲಿ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟ, ರೋಟರಿ ಕ್ಲಬ್ ಕುಂದಾಪುರ ಮಿಡ್‍ಟೌನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಟೀಕೆಗಳನ್ನು ಮೆಟ್ಟಿ ನಿಂತು ಮನೋಬಲ ವೃದ್ಧಿಸಿಕೊಂಡರಷ್ಟೇ ಮಹಿಳಾ ಸಬಲೀಕರಣ ಸಾಧ್ಯ ಉಳಿತಾಯದ ಮೂಲಕ, ಸಂಘಸಂಸ್ಥೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಇವೆರಡನ್ನು ಮಾಡಬಹುದು ಎಂದರು.

Click Here

ಅಧ್ಯಕ್ಷತೆಯನ್ನು ತಾಲೂಕು ಮಹಿಳಾ ಒಕ್ಕೂಟ ಅಧ್ಯಕ್ಷೆ ರಾಧಾದಾಸ್ ವಹಿಸಿ, ಸಾಂತ್ವನ ಕೇಂದ್ರದ ಸಿಬಂದಿಗೆ ಸರಿಯಾದ ರೀತಿಯಲ್ಲಿ ಸರಕಾರ ವೇತನ ನೀಡದ ಕಾರಣ ಕೈಯಿಂದ ವೇತನ ನೀಡಿ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅದನ್ನು ಮುಚ್ಚಲಾಗುವುದು ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾ„ಕಾರಿ ಮುರಳೀಧರ ಶೆಟ್ಟಿ, ರೋಟರಿ ಮಾಜಿ ಸಹಾಯಕ ಗವರ್ನರ್ ಆವರ್ಸೆ ಸುಧಾಕರ ಶೆಟ್ಟಿ, ಉದ್ಯಮಿ ಸುಬ್ಬಣ್ಣ ಶೆಟ್ಟಿ ಮಾರ್ಕೋಡು, ಉಡುಪಿಯ ಮಹಿಳಾ ಉದ್ಯಮಿಗಳ ಪವರ್ ವೇದಿಕೆ ಅಧ್ಯಕ್ಷೆ ತಾರಾ ತಿಮ್ಮಯ್ಯ, ಪ್ರಿಯಾಂಕಾ, ತಾಲೂಕು ಮಹಿಳಾ ಒಕ್ಕೂಟ ಗೌರವಾಧ್ಯಕ್ಷೆ ಹೇಮಾವತಿ ಹೆಗ್ಡೆ, ಕಾರ್ಯದರ್ಶಿ ಜಯಂತಿ ಐತಾಳ್, ಜಿಲ್ಲಾ ಸೀಶಕ್ತಿ ಸಂಘದ ಕಾರ್ಯದರ್ಶಿ ಪ್ರೇಮಾ, ಕುಂಭಾಶಿ ಪಂಚಾಯತ್ ಅಧ್ಯಕ್ಷೆ ಶ್ವೇತಾ, ಅಂಗನವಾಡಿ ಒಕ್ಕೂಟಗಳ ರಾಜ್ಯ ಕಾರ್ಯದರ್ಶಿ ಉಷಾ ಕೆ. ಉಪಸ್ಥಿತರಿದ್ದರು.

ಸಮಾಜಸೇವಾ ಕಾರ್ಯಕರ್ತೆ ಕಾಂತಿ ಸಿ. ಭಂಡಾರಿ, ರೋಟರಿ ಅಸಿಸ್ಟಂಟ್ ಗವರ್ನರ್ ಜಯಪ್ರಕಾಶ್ ಶೆಟ್ಟಿ, ಅಂಗನವಾಡಿ ಯೂನಿಯನ್ ಅಧ್ಯಕ್ಷೆ ಫಿಲೋಮಿನಾ ಅವರನ್ನು ಸಮ್ಮಾನಿಸಲಾಯಿತು. ಲೇಖಕಿ, ನಾಟಿವೈದ್ಯೆ ಶಶಿಕಲಾ ಆಚಾರ್ಯ ನಾಗೂರು ಅವರು ಬರೆದ ಮನೆ ಅಂಗಳದ ಮದ್ದು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಅಮಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಟ್ಟಿ ನಿರ್ವಹಿಸಿದರು.

Click Here

LEAVE A REPLY

Please enter your comment!
Please enter your name here