ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸಮಾಜದಲ್ಲಿ ಸೇವಾ ಮನೋಭಾವವನ್ನು ಹೆಚ್ಚು ಮೈಗೂಡಿಸಿಕೊಂಡು ಬಡವರಿಗೆ, ನಿರ್ಗತಿಕರಿಗೆ, ಸೂರಿಲ್ಲದವರಿಗೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹಾಗೂ ವೈದ್ಯಕೀಯ ನೆರವು ಪೀಡಿತರಿಗೆ ಸದಾಕಾಲ ಸಹಾಯ ಹಸ್ತ ನೀಡುವ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದ ರಮೇಶ್ ದೇವಾಡಿಗ ಇವರ ಸಮಾಜ ಸೇವೆಯನ್ನು ಗುರುತಿಸಿ ಮಲತ್ತಹಳ್ಳಿ ಸ್ಪೋರ್ಟ್ಸ್ ಕ್ಲಬ್ (ರಿ) ಬೆಂಗಳೂರು, ವತಿಯಿಂದ ಡಾ. ಪುನೀತ್ ರಾಜ್‍ಕುಮಾರ್ ಪ್ರಶಸ್ತಿ-2022 ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಲತ್ತಹಳ್ಳಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು ಲಿಂಗರಾಜು ಗೌಡ, ಲಕ್ಷ್ಮೀ ಮಲತ್ತಹಳ್ಳಿ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯ ಮುಖ್ಯ ಶಿಕ್ಷಕರು, ಧರ್ಮೇಂದ್ರ ಇತಿಹಾಸ ತಜ್ಞರು ಮುಂತಾದವರು ಉಪಸ್ಥಿತರಿದ್ದರು.
ಉಚಿತ ಕಣ್ಣಿನ ತಪಾಸಣೆ. ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ ಊಟ ಉಪಚಾರವನ್ನು ಏರ್ಪಡಿಸಿಸಲಾಗಿತ್ತು.











