ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಇಲ್ಲಿನ ಹೋಲಿ ರೋಸರಿ ಚರ್ಚ್ ನ ಸಭಾಂಗಣದಲ್ಲಿ ನಡೆದ ಕೆಥೋಲಿಕ್ ಸಭಾ ಕುಂದಾಪುರ ಘಟಕದ ಚುನಾವಣೆಯಲ್ಲಿ 2022-2023ನೇ ಸಾಲಿಗೆ ಅಧ್ಯಕ್ಷರಾಗಿ ಶೈಲಾ ಅಲ್ಮೇಡಾ ರವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನಿಯೋಜಿತ ಅಧ್ಯಕ್ಷರಾಗಿ ವಿಲ್ಸನ್ ಅಲ್ಮೇಡಾ, ಉಪಾಧ್ಯಕ್ಷರಾಗಿ ಡಾ ಸೋನಿ ಡಿಕೋಸ್ಟ್, ಕಾರ್ಯದರ್ಶಿಯಾಗಿ ಆಲ್ಡ್ರಿನ್ ಡಿಸೋಜ, ಸಹ ಕಾರ್ಯದರ್ಶಿಯಾಗಿ ಜುಲೇಟ್ ಪಾಯಸ್, ಕೋಶಾಧಿಕಾರಿಯಾಗಿ ಪ್ರೇಮ ಡಿಕುನ್ಹ, ಸಹ ಕೋಶಾಧಿಕಾರಿಯಾಗಿ ಆಶಾ ಕರ್ವಾಲೋ ,ಸಂದೇಶ ಪ್ರತಿನಿಧಿಯಾಗಿ ಅನಿಲ್ ರೊಡ್ರಿಗಸ್, ರಾಜಕೀಯ ಸಂಚಾಲಕರಾಗಿ ವಿನೋದ್ ಕ್ರಾಸ್ತಾ, ಸರ್ಕಾರಿ ಸಂಚಾಲಕರಾಗಿ ವಾಲ್ಟರ್ ಡಿಸೋಜಾ, ಲೆಕ್ಕ ಪರಿಶೋಧಕರಾಗಿ ವಿಲ್ಸನ್ ಓಲಿವೇರಾ, ಸ್ವಯಂಸೇವಕರಾಗಿ ಮಾರ್ಕ್ ಡಿಸೋಜಾ, ಶಾಲೇಟ್ ರೆಬೆಲ್ಲೊ, ಮೈಕೆಲ್ ಗೊನ್ಸಾಲ್ ವಿಸ್ , ಮಾರಿಯಾ ಬರೆಟ್ಟೊ, ಶಾಂತಿ ಪಿಂಟೊ ಆಯ್ಕೆಯಾಗಿದ್ದಾರೆ.











