ಕುಂದಾಪುರ ಮಿರರ್ ಸುದ್ದಿ…
ಕೋಟ: ದೇವಾಡಿಗ ಸಂಘ ಕೋಟ, ಸಾಲಿಗ್ರಾಮ ಇದರ ವಾರ್ಷಿಕ ಮಹಾ ಸಭೆ ಭಾನುವಾರ ಸಾಲಿಗ್ರಾಮ ಸಂಸ್ಕ್ರತ ಪಾಠಶಾಲಾ ಸಭಾಂಗಣದಲ್ಲಿ ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟ ಸಾಲಿಗ್ರಾಮ ದೇವಾಡಿಗರ ಸಂಘದ ಅಧ್ಯಕ್ಷ ನರಸಿಂಹ ದೇವಾಡಿಗ ವಹಿಸಿದ್ದರು.
ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕ ಮಹಾಲಿಂಗ ದೇವಾಡಿಗ ಮಹಾಸಭೆಯನ್ನು ಉದ್ಘಾಟಿಸಿದರು.
ಸಭೆಯಲ್ಲಿ ಕೋಟ ಸಾಲಿಗ್ರಾಮ ದೇವಾಡಿಗರ ಸಂಘದ ಗೌರವಾಧ್ಯಕ್ಷ ಕುಮಾರ್ ದೇವಾಡಿಗ , ಸಂಘದ ಪ್ರಮುಖರಾದ ರಾಜು ದೇವಾಡಿಗ ಪಡುಕೆರೆ, ಸಾಲಿಗ್ರಾಮ ಪ.ಪಂ.ಸದಸ್ಯ ಸಂಜೀವ ದೇವಾಡಿಗ, ಸಾಲಿಗ್ರಾಮ ದೇವಾಡಿಗ ಸಂಘ ಕೋಟ, ಸಾಲಿಗ್ರಾಮ ಇದರ ಮಹಿಳಾ ಕಾರ್ಯದರ್ಶಿ ಶಾರದಾ ದೇವಾಡಿಗ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸತೀಶ್ ದೇವಾಡಿಗ ವರದಿ ವಾಚಿಸಿದರು. ವಿಜ್ಞೇಶ್ ದೇವಾಡಿಗ ಹಾಗೂ ನಾಗರಾಜ್ ದೇವಾಡಿಗ ವಿದ್ಯಾರ್ಥಿವೇತನ ಪಟ್ಟಿ ವಾಚಿಸಿದರು. ಕುಮಾರಿ ಆಶಿಕಾ ವಂದಿಸಿದರು. ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.











