ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಶಿರಸಿ ಮಾರಿಕಾಂಬಾ ದೇವಸ್ಥಾನ ಕೋಟತಟ್ಟು ಪಡುಕರೆ ಇಲ್ಲಿ ವಾರ್ಷಿಕ ವರ್ಧಂತ್ಯುತ್ಸವ ಹಾಗೂ ಬ್ರಹ್ಮಕಲಾಶಾಭಿಷೇಕ ,ಮಹಾಅನ್ನಸಂತರ್ಪಣೆ ಕಾರ್ಯಕ್ರಮ ಮಾ.23ರ ಬುಧವಾರ ನಡೆಯಲಿದ್ದು ಆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಡುವೆ ಭಾಗವಾಗಿ ತಿರುಪತಿ ದಾಸಸಾಹಿತ್ಯ ನೊಂದಾಯಿತ ಶಿರಸಿ ಮಾರಿಕಾಂಬಾ ಭಜನಾ ತಂಡ,ಭಗವತ್ ಭಜನಾ ತಂಡದ ಕೂಡುವಿಕೆಯಿಂದ ಭಜನಾ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 9.ಗ ತೆಕ್ಕಟ್ಟೆ ಕನ್ನುಕೆರೆ ಓಂಕಾರ್ ಕಲಾವಿದರಿಂದ ಎಷ್ಟ್ ಹೇಳ್ಡ್ರೂ ಅಷ್ಟೆ ಹಾಸ್ಯಮಯ ನಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ದೇವಳದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.











